September 30, 2026
Wednesday, September 30, 2026
spot_img

ಕ್ರಿಸ್ಪಿ, ಟೇಸ್ಟಿ, ಈಸಿ.. ನಾಲಿಗೆಗೆ ರುಚಿ ನೀಡುವ ಇನ್‌ಸ್ಟಂಟ್ ಮಖಾನ ಚಾಟ್ ರೆಸಿಪಿ

ಮಖಾನ

ತುಪ್ಪ

ಈರುಳ್ಳಿ, ಟೊಮೆಟೊ, ಸೌತೆಕಾಯಿ

ಹಸಿಮೆಣಸಿನಕಾಯಿ

ಖಾರದ ಪುಡಿ

ಚಾಟ್ ಮಸಾಲ

ಜೀರಿಗೆ ಪುಡಿ

ಉಪ್ಪು

ನಿಂಬೆರಸ

ಕೊತ್ತಂಬರಿ ಸೊಪ್ಪು

ಬಾಣಲೆಗೆ ೧ ಚಮಚ ತುಪ್ಪ ಹಾಕಿ, ಮಖಾನವನ್ನು ಸಣ್ಣ ಉರಿಯಲ್ಲಿ ೪-೫ ನಿಮಿಷ ಚೆನ್ನಾಗಿ ಹುರಿದು, ಒಂದು ಅಗಲವಾದ ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ಹುರಿದ ಮಖಾನಗೆ ಖಾರದ ಪುಡಿ, ಚಾಟ್ ಮಸಾಲ, ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಈಗ ಹೆಚ್ಚಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಹಸಿಮೆಣಸಿನಕಾಯಿಯನ್ನು ಸೇರಿಸಿ ಮಿಕ್ಸ್ ಮಾಡಿ. ಕೊನೆಯಲ್ಲಿ ನಿಂಬೆರಸ ಹಿಂಡಿ, ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಾಯಲ್ಲಿ ನೀರೂರಿಸುವ, ಚಟಪಟ ಮಖಾನ ಚಾಟ್ ಸವಿಯಲು ಸಿದ್ಧ!

Must Read