ಸಾಮಾಗ್ರಿಗಳು
ಹಸಿಮೆಣಸು
ಬೆಳ್ಳುಳ್ಳಿ
ಶುಂಠಿ
ಜೀರಿಗೆ
ಶೇಂಗಾ
ಎಣ್ಣೆ
ಸಾಸಿವೆ
ಕರಿಬೇವು
ಮೊಸರು
ಉಪ್ಪು
ಮಾಡುವ ವಿಧಾನ
ಮೊದಲು ಹೆಂಚಿನ ಮೇಲೆ ಶೇಂಗಾ ಹಾಕಿ ಡ್ರೈ ರೋಸ್ಟ್ ಮಾಡಿಕೊಳ್ಳಿ
ಆನಂತರ ಮಿಕ್ಸಿಗೆ ಶೇಂಗಾ, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಶುಂಠಿ,ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ನೀರು ಹಾಕಿ ಮಿಕ್ಸಿ ಮಾಡಿಕೊಳ್ಳಿ
ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಕರಿಬೇವು ಅರಿಶಿಣ ಪುಡಿ ಹಾಕಿ ನಂತರ ಮಿಕ್ಸಿಯ ಮಸಾಲೆ ಹಾಕಿ
ನಂತರ ಆಫ್ ಮಾಡಿ ಮೊಸರು ಹಾಗೂ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಸಾರು ರೆಡಿ



