ಸಾಮಾಗ್ರಿಗಳು
ಹೆಸರುಕಾಳು
ಹಸಿಮೆಣಸು
ಜೀರಿಗೆ
ಶುಂಠಿ
ಅಕ್ಕಿ
ಸಾಬುದಾನ
ಮೆಂತ್ಯೆ
ಕಡಲೆಬೇಳೆ
ಉಪ್ಪು
ರವೆ
ಮಾಡುವ ವಿಧಾನ
ರಾತ್ರಿ ಒಂದು ಬೌಲ್ಗೆ ಒಂದು ಲೋಟ ಅಕ್ಕಿಗೆ ಎರಡು ಲೋಟ ಹೆಸರುಕಾಳು ಹಾಕಿ
ಆನಂತರ ಒಂದು ಹಿಡಿಯಷ್ಟು ಸಾಬುದಾನ, ಅರ್ಧ ಹಿಡಿ ಕಡಲೆಬೇಳೆ ಒಂದು ಸ್ಪೂನ್ ಮೆಂತ್ಯೆ ಹಾಕಿ
ನೀರು ಹಾಕಿ ರಾತ್ರಿಯಿಡೀ ನೆನೆಸಿ
ಬೆಳಗ್ಗೆ ಇದಕ್ಕೆ ಉಪ್ಪು, ಹಸಿಮೆಣಸು, ಶುಂಠಿ ಹಾಗೂ ಜೀರಿಗೆ ಹಾಕಿ ರುಬ್ಬಿಕೊಳ್ಳಿ
ಜೊತೆಗೆ ನೀರು ಹಾಕಿ ರುಬ್ಬಿಕೊಳ್ಳಿ, ನಂತರ ಸ್ವಲ್ಪ ರವೆ ಮಿಕ್ಸ್ ಮಾಡಬಹುದು, ಬೇಕಿಲ್ಲ ಎಂದರೆ ಇದನ್ನು ಸ್ಕಿಪ್ ಮಾಡಿ
ಸಾಗು, ಟೊಮ್ಯಾಟೊ ಗೊಜ್ಜು ಅಥವಾ ಎಣಗಾಯಿ ಜೊತೆ ಈ ದೋಸೆ ಸೂಪರ್



