October 3, 2026
Saturday, October 3, 2026
spot_img

ಪ್ರೇಕ್ಷಕರಿಗಿಂತ ದೊಡ್ಡ ಮಾರ್ಕೆಟಿಂಗ್‌ ಟೀಮ್‌ ಇಲ್ಲ! ಸದ್ದಿಲ್ಲದೇ ಒಳ್ಳೆಯ ಕಲೆಕ್ಷನ್‌ ಮಾಡುತ್ತಿದೆ ʼಪ್ರೇಮದ ಊರಲಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಲವೊಮ್ಮೆ ಎಷ್ಟೇ ಬೆಸ್ಟ್‌ ಮಾರ್ಕೆಟಿಂಗ್‌ ಟೀಂಗೆ ಕೆಲಸ ನೀಡಿದರೂ ಸಿನಿಮಾ ಪ್ರತೀ ಮನೆಯನ್ನು ತಲುಪೋಕೆ ಸಾಧ್ಯವಿಲ್ಲ. ಆದರೆ ಹಲವು ಬಾರಿ ಕಥೆ ಚೆನ್ನಾಗಿದ್ದು, ಮಾರ್ಕೆಟಿಂಗ್‌ ಟೀಂಗೆ ಹಣ ವ್ಯರ್ಥ ಮಾಡಿಲ್ಲ ಎನ್ನುವುದಾದರೇ ಜನರೇ ಮಾರ್ಕೆಟಿಂಗ್‌ ಟೀಂ ಆಗಿ ಕೆಲಸ ಮಾಡುತ್ತಾರೆ. ಬಾಯಿಂದ ಬಾಯಿಗೆ ಸಿನಿಮಾ ಚೆನ್ನಾಗಿದೆ ಎನ್ನುವ ಸುದ್ದಿ ಹರಡಿ ಫಿಲಂ ಸೂಪರ್‌ ಹಿಟ್‌ ಆಗುತ್ತದೆ.

ಇತ್ತೀಚೆಗೆ ತೆರೆಕಂಡ ಟಾಕ್ಸಿಕ್‌ ಎಷ್ಟು ಹಣ ಖರ್ಚು ಮಾಡಿದರೂ ಸಿನಿಮಾ ಪ್ರೇಕ್ಷಕರಿಗೆ ಅಷ್ಟೇನೂ ಇಷ್ಟವಾಗಲಿಲ್ಲ. ಅದೇ ಮರಾಠಿ ಸಿನಿಮಾವಾದ ಹನುಮಾನ್‌ ಅಂಶ ಬರೀ ಎರಡು ಕೋಟಿ ರೂಪಾಯಿ ಖರ್ಚು ಮಾಡಿ ಇದೀಗ ನಾಲ್ಕು ನೂರು ಕೋಟಿ ಬಾಚಿಕೊಂಡಿದೆ. ಇದಕ್ಕೆ ಕಾರಣ ಜನ! ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಾ ಸಿನಿಮಾವನ್ನು ಗೆಲ್ಲಿಸಿಬಿಡುತ್ತಾರೆ.

ಇದೇ ಸಾಲಿಗೆ ನಮ್ಮ ಕನ್ನಡದ ಪ್ರೇಮದ ಊರಲಿ ಸಿನಿಮಾ ಸೇರಿಕೊಂಡಿದೆ. ಮೊದಲು ಯಾರೂ ಸಿನಿಮಾಕ್ಕೆ ಹೋಗಿಯೇ ಇಲ್ಲ. ಆದರೆ ಇದೀಗ ಇದ್ದಕ್ಕಿದ್ದಂತೆಯೇ ಜನರು ಸಿನಿಮಾ ಥಿಯೇಟರ್‌ಗೆ ಹೋಗಿ ಪ್ರೇಮದ ಊರಲಿ ಸಿನಿಮಾ ನೋಡಿ ಎಲ್ಲರಿಗೂ ನೋಡುವಂತೆ ತಿಳಿಸುತ್ತಿದ್ದಾರೆ. ಇದು ಸಿನಿಮಾ ಕಥೆಯ ಕಮಾಲ್‌ ಆಗಿದೆ.

ಮೂರು ಕೋಟಿ ರೂಪಾಯಿಯಲ್ಲಿ ತಯಾರಾದ ಈ ಸಿನಿಮಾ ನಿನ್ನೆ ಗಾಂಧಿ ಜಯಂತಿ ರಜೆ ಇದ್ದ ಕಾರಣ ಉತ್ತಮ ಕಲೆಕ್ಷನ್‌ ಮಾಡಿದೆ. ಬರೋಬ್ಬರಿ ಹತ್ತು ಕೋಟಿ ರೂಪಾಯಿ ಕಮಾಯಿ ಮಾಡಿದ್ದು, ದೊಡ್ಡ ದೊಡ್ಡ ಸ್ಟಾರ್‌ಗಳೇ ಆಶ್ಚರ್ಯಪಟ್ಟಿದ್ದಾರೆ.

ಮೊದಲ ದಿನ ಕೇವಲ 13 ಲಕ್ಷ ರೂಪಾಯಿ ಕಲೆಕ್ಷನ್‌ನೊಂದಿಗೆ ಸಾಧಾರಣ ಆರಂಭ ಕಂಡಿದ್ದ ಈ ಸಿನಿಮಾ ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಾಗಿ ವಾರದ ದಿನಗಳಲ್ಲೂ ಸತತ ಏರಿಕೆ ಕಾಣುತ್ತಾ ಬಂದಿತ್ತು. ಸೆಪ್ಟೆಂಬರ್ 29 ಮಂಗಳವಾರ 1.09 ಕೋಟಿ ರೂಪಾಯಿ, ಸೆಪ್ಟೆಂಬರ್ 30 ಬುಧವಾರ 1.28 ಕೋಟಿ ರೂಪಾಯಿ ಹಾಗೂ ಅಕ್ಟೋಬರ್ 1 ಗುರುವಾರ 1.86 ಕೋಟಿ ರೈಪಾಯಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ಅಲ್ಲಿ ಪಾರುಪತ್ಯ ಸಾಧಿಸಿತ್ತು.

ಅಕ್ಟೋಬರ್ 2 ರ ಗಾಂಧಿ ಜಯಂತಿಯ ಸಾರ್ವಜನಿಕ ರಜಾದಿನವು ಚಿತ್ರತಂಡದ ಪಾಲಿಗೆ ಬಂಪರ್ ಕೊಡುಗೆಯಾಗಿ ಪರಿಣಮಿಸಿತು. ರಜೆಯ ಲಾಭವನ್ನು ಸಿನಿಮಾ ಸಂಪೂರ್ಣವಾಗಿ ಪಡೆದುಕೊಂಡಿದ್ದು, 8 ನೇ ದಿನ ಬರೋಬ್ಬರಿ 3.46 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿದೆ. ಶೇ. 82 ರಷ್ಟು ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಚಿತ್ರಮಂದಿರಗಳತ್ತ ಜನಸಾಗರವೇ ಹರಿದುಬಂದಿದೆ.

ಇದೀಗ ವೀಕೆಂಡ್‌ ಇರುವ ಕಾರಣ ಸಿನಿಮಾ ಕಲೆಕ್ಷನ್‌ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Must Read