October 3, 2026
Saturday, October 3, 2026
spot_img

ದಿನಭವಿಷ್ಯ | ಸವಾಲುಗಳ ಮಧ್ಯೆಯೂ ಸಿಗಲಿದೆ ಯಶಸ್ಸು, ಸಾಧನೆಗೆ ಒಲಿಯಲಿದೆ ಶ್ಲಾಘನೆ

ಮೇಷ
ನಿಮ್ಮ ಸಾಧನೆಗೆ ಶ್ಲಾಘನೆ ಸಿಗಲಿದೆ. ಸವಾಲು ಎದುರಾದರೂ ನಿಭಾಯಿಸುವಿರಿ. ಕ್ಷುಲ್ಲಕ ವಿಚಾರಕ್ಕೆ ಹೆಚ್ಚು ಗಮನ ನೀಡಲು ಹೋಗಬೇಡಿ.
ವೃಷಭ
ಉತ್ಸಾಹ ಹೆಚ್ಚು. ಕಾರ್ಯಸಿದ್ಧಿ. ಗುರಿ ಸಾಧನೆಯಲ್ಲಿ ವಿಳಂಬ ಸಲ್ಲದು. ಆತ್ಮೀಯರ ಸಂಗದಲ್ಲಿ ಖುಷಿ ಕಂಡರೂ ಮನಸ್ತಾಪವೂ ಸಂಭವ.
ಮಿಥುನ
 ಎಲ್ಲರ ಜತೆ ಆಪ್ತವಾಗಿ ವ್ಯವಹರಿಸುವ ಗುಣ ಉತ್ತಮ ಫಲ ನೀಡಲಿದೆ. ಪ್ರೀತಿಯ ಅಹವಾಲು ಸಫಲ. ಪೂರಕ ಪ್ರತಿಸ್ಪಂದನೆ.
ಕಟಕ
 ಕೆಲವು ವ್ಯಕ್ತಿಗಳ ಕುರಿತ ನಿಮ್ಮ ಧೋರಣೆ ಬದಲಾದೀತು. ಅವರ ವರ್ತನೆ ಅವರ ನೈಜ ಸ್ವಭಾವ ಬಿಚ್ಚಿಡಲಿದೆ. ಕೌಟುಂಬಿಕ ಸಹಕಾರ. 
ಸಿಂಹ
ಇತರರ ಮನ ಒಲಿಸುವಲ್ಲಿ ನೀವು ನಿಪುಣರು. ಅದು ಇಂದು ಬಿಕ್ಕಟ್ಟು ಪರಿಹಾರಕ್ಕೆ ನೆರವಾಗಲಿದೆ. ಆರ್ಥಿಕ ಒತ್ತಡ ಹೆಚ್ಚುವುದು.
ಕನ್ಯಾ
ಇತರರ ಮುಂದೆ ನಿಮ್ಮ ನಿಲುವು ಮಂಡಿಸು ವಾಗ ಸಂಘರ್ಷಕ್ಕೆ ಆಸ್ಪದ ಕೊಡಬೇಡಿ. ವಿನಯದ ವರ್ತನೆ ಒಳಿತು. ದುಬಾರಿ ವಸ್ತು ಖರೀದಿ ಸಾಧ್ಯತೆ.
ತುಲಾ
ನಿಮ್ಮ ಪ್ರಾಕ್ಟಿಕಲ್ ಧೋರಣೆ ಬಿಕ್ಕಟ್ಟು ಪರಿಹಾರಕ್ಕೆ ನೆರವು ನೀಡಲಿದೆ. ಆರ್ಥಿಕ ಲಾಭ. ಪ್ರೀತಿಪಾತ್ರರಿಂದ ಅಚ್ಚರಿಯ ಕೊಡುಗೆ.
ವೃಶ್ಚಿಕ
ನಿಮ್ಮ ಧೋರಣೆ ಬದಲಿಸಿಕೊಳ್ಳಿ. ಎಲ್ಲರು ನಿಮ್ಮನ್ನು ಮೆಚ್ಚುವರು. ಕ್ಷುಲ್ಲಕ ವಿಚಾರಕ್ಕೆ ಸಂಘರ್ಷಕ್ಕೆ ಇಳಿಯದಿರಿ. ಅನಿರೀಕ್ಷಿತ ಖರ್ಚು.
ಧನು
ನಿಮ್ಮ ಗುರಿ ತಪ್ಪಿಸಲು ಕೆಲವರ ಯತ್ನ. ಅವರ ಪ್ರಭಾವಕ್ಕೆ ಸಿಲುಕದಿರಿ. ಖರ್ಚು ನಿಯಂತ್ರಿಸಿ. ಕೆಟ್ಟ ಪ್ರಲೋಭನೆಗೆ ಸಿಲುಕಬೇಡಿ, ಎಚ್ಚರ.
ಮಕರ
ನಿಮ್ಮ ಪ್ರಗತಿಗೆ ಅಡ್ಡಿಯಾಗುವ ವಿಚಾರ ಮೊದಲು ಇತ್ಯರ್ಥಪಡಿಸಿ. ಕೆಲವರ ನಿಷ್ಠುರ ಕಟ್ಟಿಕೊಳ್ಳಬೇಕಾದೀತು. ಬಂಧುಗಳ ಸಹಕಾರ.    
ಕುಂಭ
ಕಾಯುತ್ತಿದ್ದ ಅವಕಾಶವೊಂದು ಸಿಗಲಿದೆ. ಅದನ್ನು ಸರಿಯಾಗಿ ಬಳಸಿರಿ. ಮನೆಯಲ್ಲಿ ಸಣ್ಣ ವಿಷಯ ವಾಗ್ವಾದ ಸೃಷ್ಟಿಸಬಹುದು.
 ಮೀನ
ಕುಟುಂಬ ಸದಸ್ಯರ ಮಾತಿಗೆ ಕಿವಿಗೊಡಿ. ಭಿನ್ನಮತ ಬಗಹರಿಸಲು ಗಮನ ಕೊಡಿ. ವೃತ್ತಿಯ ಉದ್ವಿಗ್ನತೆ ಹೆಚ್ಚಲಿದೆ. ಏಕಾಗ್ರತೆ ಮುಖ್ಯ.

Must Read