October 3, 2026
Saturday, October 3, 2026
spot_img

ಮನೆ ನಮ್ಮದಲ್ಲ ಓನರ್‌ದು ಎನ್ನುವ ಉಡಾಫೆ ಬೇಡ, ಬಾಡಿಗೆದಾರರು ಫಾಲೋ ಮಾಡಬೇಕಾದ ರೂಲ್ಸ್‌ ಇವು..

ಮನೆ ನಮ್ಮದಲ್ಲ ಓನರ್‌ದು ನಾವು ಬಿಡುವಾಗ ಒಂದು ತಿಂಗಳ ಬಾಡಿಗೆ ಕೊಟ್ಟರೆ ಆಯ್ತು ಎಂದು ಕೈತೊಳೆದುಕೊಳ್ಳಬೇಡಿ. ನಮ್ಮ ಮನೆಯಲ್ಲ ಎಂದು ಮನೆಯನ್ನು ಹೇಗೆ ಬೇಕೆ ಹಾಗೆ ಬಳಸುವುದು, ನಲ್ಲಿಗಳನ್ನು ಜೋರಾಗಿ ತಿರುಗಿಸುವುದು, ಗೋಡೆಗಳನ್ನು ಗಲೀಜು ಮಾಡುವುದು ತಪ್ಪಾಗುತ್ತದೆ. ಮನೆ ಯಾರದ್ದೇ ಇರಬಹುದು, ಅದರಲ್ಲಿ ನೀವು ಹೇಗೆ ಇರುತ್ತೀರಿ ಹಾಗೂ ಮನೆಯಿಂದ ಹೊರಕ್ಕೆ ಹೋದಾಗ ಆ ಮನೆಯ ಪರಿಸ್ಥಿತಿ ಹೇಗಿದೆ ಎನ್ನುವುದು ಮುಖ್ಯ. ಮುಂದೆ ನಿಮ್ಮ ಸ್ವಂತ ಮನೆಗೂ ಬಾಡಿಗೆ ಬಂದ ಜನ ನಿಮ್ಮಂತೆಯೇ ವರ್ತನೆ ಮಾಡಿದರೆ ನೀವೇನು ಮಾಡುತ್ತೀರಿ ಎನ್ನುವುದನ್ನು ಆಲೋಚಿಸಿ.. ಬಾಡಿಗೆ ಮನೆಯೋ ಸ್ವಂತ ಮನೆಯೋ ಲೀಸ್‌ ಮನೆಯೋ ಕೆಲವೊಂದು ಮುಖ್ಯವಾದ ಎಟಿಕೆಟ್‌ಗಳನ್ನು ಫಾಲೋ ಮಾಡಬೇಕು. ಯಾವುದು ನೋಡಿ..

ಸಮಯಕ್ಕೆ ಸರಿಯಾಗಿ ಮನೆಯ ಬಾಡಿಗೆಯನ್ನು ನೀಡಿ. ಒಂದು ವಾರ ಟೈಮ್‌ ಕೊಡಿ, ನಾಳೆ ಕೊಡುತ್ತೇನೆ ಎನ್ನುವ ಪರಿಸ್ಥಿತಿ ತಂದುಕೊಳ್ಳಬೇಡಿ. ಸಂಬಳದ ಮೊದಲ ಭಾಗ ಮನೆಯ ಬಾಡಿಗೆಗೆಂದು ಮೀಸಲಿಡಿ. ಅದನ್ನು ಇನ್ಯಾವುದೇ ಕೆಲಸಕ್ಕೆ ಬಳಕೆ ಮಾಡಬೇಡಿ.

ನಿಮ್ಮ ಮನೆಯ ಕರೆಂಟ್‌ ಬಿಲ್‌, ವಾಟರ್‌ ಬಿಲ್‌ ಹಾಗೂ ಗ್ಯಾಸ್‌ ಬಿಲ್‌ಗಳನ್ನು ತಕ್ಷಣವೇ ಕಟ್ಟಿ. ಅಗ್ರೀಮೆಂಟ್‌ನಲ್ಲಿ ಇರುವ ವಿಷಯಗಳನ್ನು ಫಾಲೋ ಮಾಡಿದರೆ ಸಾಕಾಗುತ್ತದೆ.

ಇನ್ನು ಮನೆಯ ಕಬೋರ್ಡ್ಸ್‌, ಅಡುಗೆ ಮನೆಯ ಕಬೋರ್ಡ್‌, ಬಾಗಿಲುಗಳನ್ನು ನಿಧಾನಕ್ಕೆ ಹಾಕಿ ತೆಗೆಯಿರಿ, ನಿಮ್ಮ ಮನೆಯ ಬಾಗಿಲಿನಂತೆಯೇ ಅವರ ಮನೆಯ ಬಾಗಿಲು ಕೂಡ ವರ್ಷಾನುಗಟ್ಟಲೆ ಬಾಳಿಕೆ ಬರಲಿದೆ.

ನಿಮ್ಮಿಂದ ಆದ ಡ್ಯಾಮೇಜ್‌ಗೆ ಓನರ್‌ಗೆ ಕರೆ ಮಾಡಬೇಡಿ. ನೀವು ಜೋರಾಗಿ ತಿರುಗಿಸಿದಾಗ ನಲ್ಲಿ ಮುರಿದು ಹೋದರೆ ಓನರ್‌ ಹೊಸತನ್ನು ಕೊಡಿಸೋದಿಲ್ಲ. ಗೇಟ್‌ ಹಾಳಾಗಿದೆ, ಬಿಲ್ಡಿಂಗ್‌ನಿಂದ ನೀರು ಸೋರುತ್ತಿದೆ. ಇಂಥ ಸಮಸ್ಯೆಗಳಿದ್ದರೆ ಓನರ್‌ ಗಮನಕ್ಕೆ ತನ್ನಿ.

ಮನೆಯ ಯಾವುದೇ ಭಾಗಕ್ಕೆ ಡ್ಯಾಮೇಜ್‌ ಮಾಡಿದ್ದಲ್ಲಿ ಅದನ್ನು ಸರಿಪಡಿಸಿ. ಉದಾಹರಣೆಗೆ ಕಬೋರ್ಡ್‌ನ ಬೀಗ ಕಳೆದುಹಾಕಿದರೆ ಹೊಸ ಬೀಗ ಮಾಡಿಸಿಕೊಡಿ. ಒಡೆದುಹೋದರೆ ಹೊಸತು ಕೊಡಿಸಿ.

ಪೇಂಟ್‌ ಮಾಡುವಾಗ, ವಾಲ್‌ ಪೇಪರ್‌ ಹಚ್ಚುವಾಗ, ದೊಡ್ಡ ಮೊಳೆಗಳನ್ನು ಹೊಡೆಯಲು ಡ್ರಿಲ್‌ ಮಾಡುವಾಗ ಓನರ್‌ ಪರ್ಮಿಷನ್‌ ತೆಗೆದುಕೊಳ್ಳಿ.

ಮನೆಯಲ್ಲಿರುವ ಟಿವಿ, ಸ್ಪೀಕರ್‌ ಹಾಗೂ ಫೋನ್‌ ಸದ್ದು ಇತರರಿಗೆ ಕಿರಿಕಿರಿ ಮಾಡದಂತಿರಲಿ. ಬೆಳಗ್ಗೆ ಎಂಟರಿಂದ ರಾತ್ರಿ ಹತ್ತರವರೆಗೂ ಒಕೆ ಅದಾದನಂತರ ಎಷ್ಟು ಕಡಿಮೆ ಸದ್ದು ಇರುತ್ತದೆಯೋ ಅಷ್ಟು ಬೆಸ್ಟ್‌.
ಸ್ನೇಹಿತರನ್ನು ಕರೆದು ಜೋರಾಗಿ ಕೇಕೆ ಹಾಕುವುದು, ಬೆಳಗಿನ ಜಾವದವರೆಗೂ ಮ್ಯೂಸಿಕ್‌ ಹಾಕುವುದು ತಪ್ಪು.

ಮನೆಯಲ್ಲಿ ಮನೆಯ ಪಾರ್ಕಿಂಗ್‌ನಲ್ಲಿ ಏನಾದರೂ ಕಾರ್ಯಕ್ರಮ ಮಾಡಿದರೆ ನಂತರ ಎಲ್ಲವನ್ನೂ ಕ್ಲೀನ್‌ ಮಾಡಿಬಿಡಿ. ನಿಮ್ಮದಲ್ಲದ ಜಾಗದಲ್ಲಿ ಪಾರ್ಕಿಂಗ್‌ ಕೂಡ ಮಾಡಬೇಡಿ.

Must Read