ಹೊಸದಿಗಂತ ವರದಿ ಬಂಟ್ವಾಳ:
ಬಂಟ್ವಾಳ ತಾಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಗಾಳಿ, ಮಳೆ ಅಬ್ಬರ ಕಾಣಿಸಿಕೊಂಡಿದ್ದು, ಸೋಮವಾರ ಅಜ್ಜಿಬೆಟ್ಟು ಗ್ರಾಮದ ಮಲೆರ್ಮಲ ಕೋಡಿ ಎಂಬಲ್ಲಿ ಸಿಡಿಲು ಬಡಿದು ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದಾರೆ.
ಇಲ್ಲಿನ ಕುಶಲಾಕ್ಷಿ ಮೂಲ್ಯ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಕುಶಲಾಕ್ಷಿಯವರು ಗಂಭೀರ ಸ್ವರೂಪದ ಗಾಯಗೊಂಡಿದ್ದು ತುಂಬೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮನೆಗೂ ತೀವ್ರ ಸ್ವರೂಪದ ಹಾನಿಯಾಗಿದೆ.
ಅದೇ ರೀತಿ ಪಂಜಿಕಲ್ಲು ಗ್ರಾಮದ ಸರಕಾರಿ ಪ್ರೌಢಶಾಲೆಗೂ ಸಿಡಿಲು ಬಡಿದು ಶಾಲಾ ಕಟ್ಟಡದ ಕೆಲವು ಭಾಗಗಳಿಗೆ ಹಾನಿಯಾಗಿದೆ. ಶಾಲಾ ಕೊಠಡಿಯು ಮತಗಟ್ಟೆ ಸಂಖ್ಯೆ 59 ಮತ್ತು 60 ರ ಮತಗಟ್ಟೆ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಭಾಗಶ: ಹಾನಿಯಾಗಿದೆ.



