October 6, 2026
Tuesday, October 6, 2026
spot_img

ಶ್ರೀರಂಗಪಟ್ಟಣದ ದಸರಾ ಉದ್ಘಾಟನೆಗೆ ನಟ ರವಿಚಂದ್ರನ್‌ಗೆ ಅಧಿಕೃತ ಆಹ್ವಾನ

ಹೊಸದಿಗಂತ ವರದಿ ಮಂಡ್ಯ :

416ನೇ ಶ್ರೀರಂಗಪಟ್ಟಣ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಕನ್ನಡದ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ವಿ. ರವಿಚಂದ್ರನ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ಅಧೀಕೃತ ಆಹ್ವಾನ ನೀಡಲಾಯಿತು.

ಜಿಲ್ಲಾಧಿಕಾರಿ ಡಾ. ಕುಮಾರ, ಸೆಸ್ಕ್‌ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ಜಿಲ್ಲಾಡಳಿತದ ಪರವಾಗಿ ರವಿಚಂದ್ರನ್ ಅವರಿಗೆ ಆಹ್ವಾನ ಪತ್ರಿಕೆ ಜೊತೆಗೆ ಹೂಗುಚ್ಚ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಆಹ್ವಾನಿಸಿದರು.

ಅ. 15ರಂದು ನಡೆಯುವ ಶ್ರೀರಂಗಪಟ್ಟಣ ದಸರಾ ಉದ್ಘಾಟಿಸಲು ರವಿಚಂದ್ರನ್ ಅವರು ಸಮ್ಮತಿ ವ್ಯಕ್ತಪಡಿಸಿದರು.

Must Read