Sunday, September 21, 2025

ರೈತಾಪಿ ವರ್ಗದ ಹಿತ ಮರೆತ ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದೆ: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ,ಯಾದಗಿರಿ:

ರೈತಾಪಿ ವರ್ಗದ ಹಿತವನ್ನು ಮರೆತ ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿಯಲ್ಲಿ ನಡೆದ ಮಾಜಿ ಶಾಸಕ ದಿ.ವೆಂಕಟರಡ್ಡಿ ಮುದ್ನಾಳ್ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರಿಗೆ ಮೋಸ ಮಾಡುವ ಯಾವ ರಾಜಕಾರಣಿ ಸಹ ಉದ್ದಾರ ಆಗಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿಸರು.

ಕಲ್ಯಾಣ ಭಾಗದಲ್ಲಿ ಅತಿವೃಷ್ಠಿಯಾಗಿದೆ, ತೊಗರಿ, ಹತ್ತಿ ಬೆಳೆಗಳು ಸಂಪೂರ್ಣ ನಾಶವಾದರೂ ರಾಜ್ಯ ಸರ್ಕಾರ ಬೆಳೆ ಸಮೀಕ್ಷೆ ನಡೆಸದೆ ಅಸಡ್ಡೆ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.

ಇದನ್ನೂ ಓದಿ