October 7, 2026
Wednesday, October 7, 2026
spot_img

ಫಿಟ್ & ಫುಡ್ 07 | ರುಚಿ, ಆರೋಗ್ಯದ ಸೂಪರ್ ಕಾಂಬಿನೇಷನ್.. ಈ ಟೇಸ್ಟಿ ಸೋಯಾಬೀನ್ ಪರೋಟ

ತಿಂಡಿಗೆ ರೊಟ್ಟಿ-ದೋಸೆ ತಿಂದು ಬೇಸರವೇ? ಹಾಗಿದ್ರೆ ನಿಮಿಷಗಳಲ್ಲಿ ಮಾಡಿ ಈ ಟೇಸ್ಟಿ ಸೋಯಾಬೀನ್ ಪರೋಟ ರೆಸಿಪಿ

ಏನೇನ್ ಬೇಕು

ಗೋಧಿ ಹಿಟ್ಟು

ಸೋಯಾಬೀನ್

ತೊಗರಿಬೇಳೆ

ಈರುಳ್ಳಿ, ಹಸಿಮೆಣಸಿನಕಾಯಿ

ಜೀರಿಗೆ, ಗರಂ ಮಸಾಲೆ, ಅರಿಶಿಣ, ಖಾರದ ಪುಡಿ, ಕೊತ್ತಂಬರಿ ಸೊಪ್ಪು

ಉಪ್ಪು, ಎಣ್ಣೆ

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, 15 ನಿಮಿಷ ಪಕ್ಕಕ್ಕೆ ಇಡಿ. ಈಗ ಸೋಯಾಬೀನ್ ಮತ್ತು ತೊಗರಿಬೇಳೆಯನ್ನು ಕುಕ್ಕರ್ ನಲ್ಲಿ 2 ವಿಸಿಲ್ ಕೂಗಿಸಿ ಬೇಯಿಸಿ ನಂತರ ಅದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಈರುಳ್ಳಿ, ಹಸಿಮೆಣಸಿನಕಾಯಿ, ಮಸಾಲೆ ಪದಾರ್ಥಗಳು ಹಾಗೂ ಸೋಯಾ-ಬೇಳೆ ಮಿಶ್ರಣವನ್ನು ಸೇರಿಸಿ 3-4 ನಿಮಿಷ ಹುರಿಯಿರಿ. ಕಲಸಿದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಅದರೊಳಗೆ ತಯಾರಿಸಿದ ಮಿಶ್ರಣವನ್ನು ಇಟ್ಟು ಮುಚ್ಚಿ ನಂತರ ಲಟ್ಟಿಸಿ, ಕಾವಲಿಯ ಮೇಲೆ ಎಣ್ಣೆ ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಬೇಯಿಸಿದರೆ ಬಿಸಿಬಿಸಿಯಾದ ಸೋಯಾಬೀನ್ ಪರೋಟ ರೆಡಿ.

ಪರೋಟವನ್ನು ಮೊಸರು, ಬೆಣ್ಣೆ ಅಥವಾ ಉಪ್ಪಿನಕಾಯಿಯೊಂದಿಗೆ ಸವಿದರೆ ಅದರ ಮಜವೇ ಬೇರೆ.

ಹೆಲ್ತ್ ಗೆ ಇದ್ರಿಂದ ಏನ್ ಬೆನಿಫಿಟ್ಸ್?

ಸೋಯಾದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿರುವುದರಿಂದ ಇದು ಮಾಂಸಖಂಡಗಳ ಬೆಳವಣಿಗೆಗೆ ಮತ್ತು ದಿನಪೂರ್ತಿ ಉತ್ಸಾಹದಿಂದಿರಲು ನೆರವಾಗುತ್ತದೆ.

ಬೇಳೆಯಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಮಕ್ಕಳಿಗೆ ಇದು ಅತ್ಯುತ್ತಮ ಪೌಷ್ಠಿಕ ಉಪಾಹಾರವಾಗಿದೆ.

ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆಯನ್ನು ನೀಗಿಸಲು ಈ ಪರೋಟ ಒಂದು ಸರಳ ದಾರಿ.

Must Read