October 7, 2026
Wednesday, October 7, 2026
spot_img

ಮಹಾನ್ ಸಾಹಿತಿ ಡಿವಿಜಿ ಪುಣ್ಯಸ್ಮರಣೆ: ಕಗ್ಗದ ಕಾಲಾತೀತ ತತ್ವಗಳಿಗೆ ಸಿಎಂ ಡಿಕೆಶಿ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಕನ್ನಡದ ಕಗ್ಗಬ್ರಹ್ಮ, ಆಧುನಿಕ ಸರ್ವಜ್ಞ್ಯ ಡಾ. ಡಿ.ವಿ. ಗುಂಡಪ್ಪ ಅವರ ಪುಣ್ಯಸ್ಮರಣೆಯ ದಿನವಾಗಿದ್ದು, ಸಿಎಂ ಡಿ.ಕೆ. ಶಿವಕುಮಾರ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ಮಂಕುತಿಮ್ಮನ ಕಗ್ಗದ ಮೂಲಕ ನಮ್ಮೆಲ್ಲರಿಗೂ ಬದುಕಿನ ಶ್ರೇಷ್ಠ ಮೌಲ್ಯಗಳನ್ನು ಉಣಬಡಿಸಿದ ಮಹಾನ್ ಸಾಹಿತಿ ಹಾಗೂ ದಾರ್ಶನಿಕ ಶ್ರೀ ಡಿ. ವಿ. ಗುಂಡಪ್ಪ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.

ಸಾಹಿತ್ಯ, ಪತ್ರಿಕೋದ್ಯಮ, ಹಾಗೂ ತತ್ವಶಾಸ್ತ್ರ ಕ್ಷೇತ್ರಗಳಿಗೆ ಅವರು ನೀಡಿದ ಅಪಾರ ಕೊಡುಗೆ ಮತ್ತು ತಮ್ಮ ಬರಹಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಅವರ ಪಾಂಡಿತ್ಯ ಸದಾ ಸ್ಮರಣೀಯ. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದ ಡಿವಿಜಿ ಅವರ ವಿಚಾರಧಾರೆಗಳು ಹಾಗೂ ಕಗ್ಗದ ಕಾಲಾತೀತ ತತ್ವಗಳು ಇಂದಿಗೂ ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ಹೇಳಿದ್ದಾರೆ.

Must Read