ಹೊಸದಿಗಂತ ವರದಿ ಬಳ್ಳಾರಿ:
ಹಾಲು ಉತ್ಪಾದಕರನ್ನು ಉಳಿಸಲು ಹಾಲಿನ ದರ ಏರಿಕೆ ಅನಿವಾರ್ಯ, ಪಕ್ಕದ ಆoದ್ರದಲ್ಲಿ ಹಾಲಿನ ದರ ನಮ್ಮ ರಾಜ್ಯಕ್ಕಿಂತ ಹೆಚ್ಚಿದೆ, ಮೊದಲೇ ಏರಿಕೆ ಮಾಡ್ಬೇಕಿತ್ತು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ತಾಲೂಕಿನ ಹಲಕುoದಿ ಗ್ರಾಮದಲ್ಲಿ ತೊಗರಿ ಬೆಳೆ ವೀಕ್ಷಣೆ ಮಾಡಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಗ್ರಾಹಕರು ಎಷ್ಟು ಮುಖ್ಯನೋ ಹಾಲು ಉತ್ಪಾದಕರು ಅಷ್ಟೇ ಮುಖ್ಯ ಎಂದು ಸಮರ್ಥಿಸಿಕೊಂಡರು.
ಶಾಸಕರು, ಸಚಿವರ ಸ್ಟ್ರಿoಗ್ ಆಪರೇಷನ್ ನಡೆಯುತ್ತಿದೆ, ಹುಷಾರ್ ಆಗಿರಿ ಎಂದು ಸಿ.ಎಂ.ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಹಜವಾಗಿ ಅವರಿಗೆ ಆಂತರಿಕ ಮಾಹಿತಿ ಬಂದಿರುತ್ತೆ ಅದಕ್ಕಾಗಿ ಅವರು ಹೇಳಿರಬಹುದು, ಈ ಕುರಿತು ನನ್ನ ಗಮನಕ್ಕಿಲ್ಲ ಎಂದರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ನೇಮಕ ವಿಳಂಬ ಕುರಿತು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಿಲ್ಲ ಎಂದು ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ನೇಮಕ ಆಗಲಿದೆ ಎಂದರು. ಈ ಸಂದರ್ಭದಲ್ಲಿ ಬುಡ ಅಧ್ಯಕ್ಷ ಜೆ. ಎಸ್. ಆಂಜಿನೇಯಲು, ಡಿಸಿಸಿ ಜಿಲ್ಲಾ ಕಾರ್ಯಧ್ಯಕ್ಷ ವಿಷ್ಣುವರ್ಧನ್ ಬೋಯಪಾಟೆ ಸೇರಿದಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿ. ಪಂ. ಸಿಇಒ ಮಮಹ್ಮದ್ ಸುಮೈರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಸೇರಿದಂತೆ ಇತರರು ಇದ್ದರು.



