October 7, 2026
Wednesday, October 7, 2026
spot_img

ದೇಶದಲ್ಲಿರುವ ಬಾಂಗ್ಲಾ & ಪಾಕಿಸ್ತಾನಿಗಳಿಗೆ ಮತದಾರರ ಹಕ್ಕು ನೀಡಲು ಹೇಗೆ ಸಾಧ್ಯ? ಜೋಶಿ ಪ್ರಶ್ನೆ

ಹೊಸದಿಗಂತ ವರದಿ ಹುಬ್ಬಳ್ಳಿ:

ದೇಶದಲ್ಲಿ ಯಾರು ಬೇಕಾದರೂ ಮತದಾರರು ಆಗಲು ಸಾಧ್ಯವಿಲ್ಲ. ಅದರಲ್ಲಿಯೂ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದವರಿಗೆ ಮತದಾರರ ಹಕ್ಕು ನೀಡಲು ಹೇಗೆ ಸಾಧ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ದೇಶದಲ್ಲಿ 13 ಕೋಟಿ ಮತದಾರರ ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಆರೋಪಕ್ಕೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರ ಅವರು, ಕಾಂಗ್ರೆಸ್ ಪಕ್ಷ ಸತತವಾಗಿ ಚುನಾವಣೆಗಳಲ್ಲಿ ಸೋಲುತ್ತಿದ್ದು, ಹತಾಶರಾಗಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ. 2014 ಲೋಕಸಭಾ ಚುನಾವಣೆ ಹಾಗೂ ಹಲವು ರಾಜ್ಯಗಳ ಚುನಾವಣೆಯಲ್ಲಿ ಸೋತಾಗ ರಾಹುಲ್ ಗಾಂಧಿ ದೇಶದಲ್ಲಿ ಮತದಾರರ ಶುದ್ಧೀಕರಣ ಆಗಬೇಕು ಎಂದು ಹೇಳಿದ್ದರು‌. ಈಗ 13 ಕೋಟಿ ಜನರ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪ‌ ಮಾಡುತ್ತಿದ್ದಾರೆ. ಇದು ಚಂಡಿವಾದವಾಗಿದೆ.13 ಕೋಟಿ ಜನರಲ್ಲಿ 2.5 ಕೋಟಿ ಜನ ಮೃತಪಟ್ಟಿದ್ದಾರೆ. 3 ಕೋಟಿ ಜನ ಬೇರೆ ಊರು, ರಾಜ್ಯ, ದೇಶಗಳಲ್ಲಿ ಇರಬಹುದು. ಅವರನ್ನು ಗುರುತಿಸುವ ಕೆಲಸ ಆಗಬೇಕು. 6 ಕೋಟಿ ಜನ ಬೇರಯಡೆ ಸ್ಥಳಾಂತರ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

2010 ರಲ್ಲಿ ದೇಶದ ಯಾವ ಪ್ರಜೆಯನ್ನು ಮತದಾರರ ಪಟ್ಟಿಯಿಂದ ಕೈಬಿಡಲ್ಲ ಎಂದು ನಿರ್ಧಾರ ಮಾಡಿದೆ‌. ಮೃತಪಟ್ಟ ಮತದಾರರ ಕೈಬಿಡಲೇಬೇಕು. ಕರ್ನಾಟಕದಲ್ಲಿ ತಮ್ಮ ಸರ್ಕಾರ ವಿದೆ. ಇಲ್ಲಿಯ ಅಧಿಕಾರಿಗಳು ತಮ್ಮವರಿದ್ದು, ಸರಿಯಾಗಿ ಪರಿಷ್ಕರಣೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ ಕಾಂಗ್ರೆಸ್ ನಾಯಕರು ಬುದ್ಧಿ ಇಲ್ಲದ ರಾಹುಲ್ ಗಾಂಧಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೆಚ್ಚಿಕೊಂಡಿದೆ. ಆದರೆ ರಾಹುಲ್ ಗಾಂಧಿ ದುರಹಂಕಾರ, ಆಳ್ವಿಕೆ ನಡೆಸಲು ಬಂದಿರುವೆ ಎಂಬ ಅಹಂಕಾರ ಪರಾಕಾಷ್ಠೆಯೇ ಕಾಂಗ್ರೆಸ್ ಸೋಲಿಗೆ ಮೂಲ ಕಾರಣ ಎಂದು ಕಿಡಿಕಾರಿದರು.

Must Read