ಸಾಮಾಗ್ರಿಗಳು
ಬೇಯಿಸಿದ ಮೊಟ್ಟೆ
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಸೊಪ್ಪು
ಉಪ್ಪು
ಚಾಟ್ ಮಸಾಲಾ
ನಿಂಬೆ ರಸ
ಪುದೀನಾ ಚಟ್ನಿ
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೇಯಿಸಿಕೊಳ್ಳಿ. ಆನಂತರ ಅದನ್ನು ರೌಂಡ್ ಆಗಿ ಕತ್ತರಿಸಿಕೊಳ್ಳಿ
ನಂತರ ಬೌಲ್‌ಗೆ ಹಾಕಿಕೊಳ್ಳಿ. ಅದಕ್ಕೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಚಾಟ್ ಮಸಾಲಾ, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ
ಬೇಕಿದ್ದಲ್ಲಿ ಇದಕ್ಕೆ ಪುದೀನಾ ಚಟ್ನಿ ಹಾಕಬಹುದು.
ನಿತ್ಯವೂ ಮೊಟ್ಟೆ ಸೇವನೆಯಿಂದಾಗಿ ದೇಹಕ್ಕೆ ಬೇಕಾದ ಎಲ್ಲ ಪ್ರೋಟೀನ್ ಅಂಶ ಸಿಗುತ್ತದೆ. ಇನ್ನು ಮಕ್ಕಳ ಬೆಳವಣಿಗೆಗೆ ಮೊಟ್ಟೆ ಸಹಕಾರಿ. ಇದರಲ್ಲಿ B12, D ಸೇರಿದಂತೆ ಹಲವು ಪೋಷಕಾಂಶಗಳಿವೆ. ಮೊಟ್ಟೆಯಲ್ಲಿನ ಹಳದಿ ಅಂಶದಿಂದ ಮೂಳೆಗಳು ಗಟ್ಟಿಯಾಗುತ್ತವೆ.


