October 8, 2026
Thursday, October 8, 2026
spot_img

ಏನಾದ್ರು ಡಿಫ್ರೆಂಟ್ ರೆಸಿಪಿ ಟ್ರೈ ಮಾಡಬೇಕು ಅನಿಸ್ತಿದ್ಯಾ.. ಈ ಸ್ಟ್ರಾಬೆರಿ ಪಾಪಡ್ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು

ಸ್ಟ್ರಾಬೆರಿ

ಸಕ್ಕರೆ

ನಿಂಬೆ ರಸ

ಜೀರಿಗೆ ಪುಡಿ

ಬ್ಲಾಕ್ ಸಾಲ್ಟ್

ಮಾಡುವ ವಿಧಾನ

ಸ್ಟ್ರಾಬೆರಿಯನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ, ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ಈ ಹಣ್ಣಿನ ಪೇಸ್ಟ್ ಅನ್ನು ಒಂದು ಬಾಣಲೆಗೆ ಹಾಕಿ. ಅದಕ್ಕೆ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ 8 ರಿಂದ 10 ನಿಮಿಷ ಚೆನ್ನಾಗಿ ಬೇಯಿಸಿ. ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ನಿಂಬೆ ರಸ, ಜೀರಿಗೆ ಪುಡಿ ಮತ್ತು ಬ್ಲಾಕ್ ಸಾಲ್ಟ್ ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿ, ಈ ಬಿಸಿ ಮಿಶ್ರಣವನ್ನು ತೆಳುವಾಗಿ ಹರಡಿ. ಇದನ್ನು 1 ರಿಂದ 2 ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದರೆ ಗರಿಗರಿಯಾದ, ಹುಳಿ-ಸಿಹಿಯಾದ ಸ್ಟ್ರಾಬೆರಿ ಪಾಪಡ್ ಸಿದ್ಧ.

Must Read