October 9, 2026
Friday, October 9, 2026
spot_img

ಫಿಟ್ & ಫುಡ್ 09 | ರುಚಿಯ ಜೊತೆ ಆರೋಗ್ಯವೂ ಸಿಗಲಿ: ಮನೆಯಲ್ಲೇ ಮಾಡಿ ಗರಿಗರಿಯಾದ ನವಣೆ ಪಡ್ಡು

ನವಣೆ ಪಡ್ಡು ರುಚಿಕರವಾದ ಹಾಗೂ ಪೌಷ್ಟಿಕಾಂಶಭರಿತ ಮುಂಜಾನೆಯ ತಿಂಡಿ. ನವಣೆ ಜೊತೆಗೆ ಬೇಳೆಗಳಿಂದ ತಯಾರಿಸುವ ಈ ಪಡ್ಡು ಬ್ರೇಕ್ ಫಾಸ್ಟ್ ಗೆ ಹೇಳಿ ಮಾಡಿಸಿದ್ದು.

ಏನೆಲ್ಲಾ ಬೇಕು

ನವಣೆ – 2 ಕಪ್
ದೋಸೆ ಅಕ್ಕಿ – 1 ಕಪ್
ಉದ್ದಿನ ಬೇಳೆ – ½ ಕಪ್
ಕಡಲೆ ಬೇಳೆ – ¼ ಕಪ್
ಮೆಂತ್ಯ, ಅವಲಕ್ಕಿ ಮತ್ತು ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಸ್ವಲ್ಪ

ಮಾಡೋದು ಹೇಗೆ?

ನವಣೆ, ದೋಸೆ ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ಮೆಂತ್ಯ ಮತ್ತು ಅವಲಕ್ಕಿಯನ್ನು ಚೆನ್ನಾಗಿ ತೊಳೆದು 5–6 ಗಂಟೆಗಳ ಕಾಲ ನೆನೆಸಿಡಿ.

ನೆನೆಸಿದ ಪದಾರ್ಥಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟಿಗೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ 6–8 ಗಂಟೆ ಹುದುಗಲು ಬಿಡಿ.

ಮಸಾಲೆ ಪಡ್ಡು ಬೇಕಿದ್ದರೆ ಈರುಳ್ಳಿ, ಹಸಿಮೆಣಸು, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಹಿಟ್ಟಿಗೆ ಸೇರಿಸಿ.

ಪಡ್ಡು ಹಂಚಿಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟು ಹಾಕಿ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ.

ಆರೋಗ್ಯಕರ ಪ್ರಯೋಜನಗಳು

ನವಣೆಯಲ್ಲಿರುವ ನಾರಿನಾಂಶವು ಕರುಳಿನ ಆರೋಗ್ಯ ಮತ್ತು ಮಲಬದ್ಧತೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ನಾರಿನಾಂಶ ಮತ್ತು ಬೇಳೆಗಳಿಂದ ದೊರೆಯುವ ಪ್ರೋಟೀನ್ ಹೊಟ್ಟೆ ತುಂಬಿದ ಅನುಭವವ ನೀಡುತ್ತದೆ.

ನವಣೆ ಮತ್ತು ಬೇಳೆಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಹಾಗೂ ಇತರ ಪೋಷಕಾಂಶಗಳಿದ್ದು, ದೈನಂದಿನ ಚಟುವಟಿಕೆಗಳಿಗೆ ಶಕ್ತಿ ಒದಗಿಸುತ್ತವೆ.

Must Read