ಸಾಮಾಗ್ರಿಗಳು
ಕ್ಯಾರೆಟ್
ಬೀನ್ಸ್
ಆಲೂಗಡ್ಡೆ
ಬದನೆಕಾಯಿ
ಬಟಾಣಿ
ಚಕ್ಕೆ
ಲವಂಗ
ಏಲಕ್ಕಿ
ಕಾಯಿ
ಶುಂಠಿ ಬೆಳ್ಳುಳ್ಳಿ
ಒಣಮೆಣಸು
ಎಣ್ಣೆ
ಪಲಾವ್ ಎಲೆ
ಮರಾಠಿ ಮೊಗ್ಗು
ಈರುಳ್ಳಿ
ಟೊಮ್ಯಾಟೊ
ಕರಿಬೇವು
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕಾಯಿ, ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಣಮೆಣಸು, ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ
ಆನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಮರಾಠಿ ಮೊಗ್ಗು, ಕರಿಬೇವು, ಪಲಾವ್ ಎಲೆ ಹಾಕಿ
ಆನಂತರ ಅದಕ್ಕೆ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ಎಲ್ಲವೂ ಬೆಂದ ನಂತರ ಉಪ್ಪು, ಅರಿಶಿಣ ಪುಡಿ, ಆನಂತರ ಎಲ್ಲ ತರಕಾರಿಗಳನ್ನು ಹಾಕಿ
ತರಕಾರಿಗಳು ಬೇಯಲಿ. ಆನಂತರ ಮಿಕ್ಸಿಯ ಮಸಾಲೆ ಹಾಕಿ, ಎಣ್ಣೆ ಬಿಡುವವರೆಗೂ ಕಾಯಿರಿ
ಆನಂತರ ಗೊಜ್ಜು ತಯಾರಾಗುತ್ತದೆ. ಬಿಸಿ ಅನ್ನಕ್ಕೆ, ಮಿಕ್ಕಿರುವ ಅನ್ನಕ್ಕೆ ಯಾವುದಕ್ಕಾದರೂ ಈ ಗೊಜ್ಜನ್ನು ಹಾಕಿ ಮಿಕ್ಸ್ ಮಾಡಿ ತಿನ್ನಬಹುದು



