ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ನಗರದ ಗೋಳಗುಮ್ಮಟ ಎಂಬಲ್ಲಿ ಮೆದುಳು ಜ್ವರಕ್ಕೆ ಬಾಲಕ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಜಿತ್ ಮಿಥುನ್ ಅಳ್ಳಿಮೋರೆ (10) ಮೃತ ಬಾಲಕ ಎಂದು ಗುರುತಿಸಲಾಗಿದೆ. ಈತ ಗೋಳಗುಮ್ಮಟ ಬಡವಾಣೆ ನಿವಾಸಿಯಾಗಿದ್ದ. ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಮನೆಯವರು ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.
ಜ್ವರದ ತೀವ್ರತೆ ಹೆಚ್ಚಾದ ಕಾರಣ ಜ್ವರ ನೆತ್ತಿಗೆ ಏರಿ ಮೆದುಳಲ್ಲಿ ಕಾಣಿಸಿಕೊಂಡ ಬಾವು ಬಂದಿತ್ತು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.