ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನ ಕುದುರೆಮುಖದ ನೇತ್ರಾವತಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಯುವಕನೊಬ್ಬ ಟ್ರೆಕ್ಕಿಂಗ್ ಮಧ್ಯೆಯೇ ಹಠಾತ್ ಹೃದಯಾಘಾತಕ್ಕೀಡಾಗಿದ್ದಾರೆ.
ಮೈಸೂರು ಮೂಲದ ಏಳು ಸ್ನೇಹಿತರು ಟ್ರೆಕ್ಕಿಂಗ್‌ಗಾಗಿ ನೇತ್ರಾವತಿ ಬೆಟ್ಟಕ್ಕೆ ಬಂದಿದ್ದರು. ಈ ವೇಳೆ ರಕ್ಷಿತ್ ಟ್ರೆಕ್ಕಿಂಗ್ ಮಧ್ಯೆ ಸುಸ್ತಾಗಿ ಅಲ್ಲಿಯೇ ಕುಳಿತಿದ್ದಾರೆ. ಅವರಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮೃತದೇಹವನ್ನು ಕಳಸ ಆಸ್ಪತ್ರೆಗೆ ಕಳುಹಿಸಲಾಗಿದೆ. ಈಗಿನ್ನೂ ಜೀವನ ಅರಿತು ತಂದೆ ತಾಯಿಗೆ ನೆರವಾಗಬೇಕಿದ್ದ ರಕ್ಷಿತ್ ಸಾವನ್ನು ಕುಟುಂಬದವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.