ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 285 ವರ್ಷದಷ್ಟು ಹಳೆಯ ನಿಂಬೆ ಹಣ್ಣೊಂದನ್ನು 1.48 ಲಕ್ಷ ರೂ.ಗಳಿಗೆ ಖರೀದಿಸುವ ಮೂಲಕ ವ್ಯಕ್ತಿಯೋರ್ವರು ಎಲ್ಲರ ಹುಬ್ಬೇರಿಸಿದ್ದಾರೆ.
ಈ ಘಟನೆ ನಡೆದಿರುವುದು ಯುಕೆಯಲ್ಲಿ. ಯುಕೆಯ ಶ್ರಾಪ್‌ಶೈರ್‌ನ ಡೇವಿಡ್ ಬ್ರೆಟ್ಟೆಲ್ಸ್ ಎಂಬವರು ಈ ನಿಂಬೆ ಹಣ್ಣನ್ನು ಹರಾಜಿಗಿಟ್ಟಿದ್ದು, ಇದನ್ನು 1,416 ಪೌಂಡ್‌ಗೆ ಖರೀದಿಸಲಾಗಿದೆ.
ಅಂಗೆ ಈ ನಿಂಬೆ ಹಣ್ಣಿನಲ್ಲಿ ಏನು ವಿಸೇಷ ಅಂತೀರಾ?
ಈ ಪುರಾತನ ಕಾಲದ ನಿಂಬೆ 19ನೇ ಶತಮಾನದ ಕ್ಯಾಬಿನೆಟ್‌ನಲ್ಲಿ ಕಾಣಿಸಿಕೊಂಡಿತ್ತು. ದಿ ಸನ್ ವರದಿ ಪ್ರಕಾರ, ಇದು ಭಾರತದಲ್ಲಿನ ಬ್ರಿಟಷ್ ವಸಹಾತು ಕಾಲಕ್ಕೆ ಸಂಬಂಧಿಸಿದ್ದು. ಇದನ್ನು ರೊಮ್ಯಾಂಟಿಕ್ ಗಿಫ್ಟ್ ಆಗಿ ಇಂಗ್ಲೆಂಡ್‌ಗೆ ಕೊಂಡೊಯ್ಯಲಾಗಿದೆ. ಇದರ ಮೇಲೆ ಸಂದೇಶವನ್ನೂ ಬರೆಯಲಾಗಿದ್ದು, ಮಿಸ್ ಇ ಬಾಕ್ಸ್ಟರ್‌ಗೆ ಪಿಲು ಫ್ರಾಂಚಿನಿ ಎಂಬುವರು 1739ರ ನವೆಂಬರ್ 4 ರಂದು ನೀಡಲಾಯಿತು ಎಂಬ ಉಲ್ಲೇಖವಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಾಜುಗಾರ ಡೇವಿಡ್, ನಾವು ಇದನ್ನು 4,225 ರೂ.ನಿಂದ 6,337 ರೂ. ಬೆಲೆಯಲ್ಲಿ ಹರಾಜಿಗಿಟ್ಟಿದ್ದೆವು. ಆದರೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಇದು 1,48,000 ರೂಪಾಯಿಗೆ ಮಾರಾಟವಾಯಿತು ಎಂದಿದ್ದಾರೆ.