ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಫಿಲಿಪೈನ್ಸ್‌ನಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಂಪನದಿಂದ ಹಾನಿಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಭೂಕಂಪದ ಕೇಂದ್ರಬಿಂದು ರಾಜಧಾನಿ ಮನಿಲಾದಿಂದ 120 ಕಿಮೀ ದೂರದಲ್ಲಿ 10 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು. ಮನಿಲಾ ಸೇರಿದಂತೆ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಸದ್ದು ಕೇಳಿ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಪ್ರಸ್ತುತ ಭೂಕಂಪನದ ಪ್ರಭಾವವು ತುಂಬಾ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದಲ್ಲಿ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ, ಆದರೆ ಕಂಪನದ ಪರಿಣಾಮವನ್ನು ನಿರ್ಣಯಿಸಲು ವಿಪತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕ್ಯಾಲಟ್ಗನ್ ಪುರಸಭೆಯ ಅಧಿಕಾರಿ ಮೆಂಡೋಜಾ ಹೇಳಿದ್ದಾರೆ. ಭೂಕಂಪವು 30 ಸೆಕೆಂಡುಗಳಿಂದ ಒಂದು ನಿಮಿಷದವರೆಗೆ ಇತ್ತು ಎಂದು ವಿಪತ್ತು ಅಧಿಕಾರಿ ರೊನಾಲ್ಡ್ ಟೊರೆಸ್ ಬಹಿರಂಗಪಡಿಸಿದ್ದಾರೆ.
ಅಕ್ಟೋಬರ್ 2013 ರಲ್ಲಿ, ಮಧ್ಯ ಫಿಲಿಪೈನ್ಸ್‌ನ ಬೋಹೋಲ್ ದ್ವೀಪದಲ್ಲಿ 7.1 ತೀವ್ರತೆಯ ಭೂಕಂಪವು ಸಂಭವಿಸಿ 200 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು. ಸುಮಾರು 400,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.