ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ 9 ವರ್ಷದ ಬಾಲಕಿ ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ಎಂಬಲ್ಲಿ ಬಾಲಕಿಯೊಬ್ಬಳು ತನ್ನ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಪ್ರಾಣ ಬಿಟ್ಟಿದ್ದಾಳೆ. ಅಂಜಲಿ ಕಾರ್ತಿಕಾ (9) ಮೃತ ಬಾಲಕಿ.

ಫೋನ್‌ನೊಂದಿಗೆ ಆಟವಾಡುವಾಗ, ಚಾರ್ಜ್ ಖಾಲಿಯಾಗಿದ್ದು ಅಂಜಲಿ ಫೋನ್ ಅನ್ನು ಚಾರ್ಜ್ ಮಾಡಲು ಹೋಗುತ್ತಾಳೆ. ಈ ವೇಳೆ ಬಾಲಕಿ ವಿದ್ಯುತ್ ಸ್ಪರ್ಶಗೊಂಡು ನೆಲಕ್ಕೆ ಬಿದ್ದಿದ್ದಾಳೆ. ಶುಕ್ರವಾರ ಈ ಭೀಕರ ಘಟನೆ ನಡೆದಿದೆ.

ಬಾಲಕಿ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಆಕೆಯ ಪೋಷಕರು ಕೂಡಲೇ ಆಕೆಯನ್ನು ಗ್ರಾಮದ ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಒದ್ದೆಯಾದ ಕೈಗಳಿಂದ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶವೇ ಈ ಬಾಲಕಿಯ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here