ಆನ್ ಲೈನ್ ನಲ್ಲಿ ಐಸ್ ಕ್ರೀಂ ತರಿಸಿದ ಮಹಿಳೆಗೆ ಕಾದಿತ್ತು ಬಿಗ್ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದ ಐಸ್ ಕ್ರೀಮ್‌ನಲ್ಲಿ ಇತ್ತೀಚೆಗೆ ಮನುಷ್ಯನ ಬೆರಳು ಪತ್ತೆಯಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ನೋಯ್ಡಾದಲ್ಲಿನ ಮಹಿಳೆಗೆ ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಅಮೂಲ್ ಐಸ್ ಕ್ರೀಮ್‌ನಲ್ಲಿ ಸತ್ತ ಚೇಳು ಪತ್ತೆಯಾಗಿದೆ.

ಈ ಕುರಿತು ವಿಡಿಯೋ ಹಂಚಿಕೊಂಡಿರುವ ಮಹಿಳೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನೋಯ್ಡಾ ಸೆಕ್ಟರ್ 12ರ ನಿವಾಸಿ ದೀಪಾ ಮಕ್ಕಳ ಆಸೆಯಂತೆ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾರೆ. ಮ್ಯಾಂಗೋ ಮಿಲ್ಕ್ ಶೇಕ್ ಮಾಡುವುದಾಗಿ ಭರವಸೆ ನೀಡಿದ್ದ ದೀಪಾ, ಅಮೂಲ್ ವೆನಿಲ್ಲಾ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾರೆ. ಆನ್‌ಲೈನ್ ಬ್ಲಿಂಕಿಂಟ್ ಮೂಲಕ ಐಸ್ ಕ್ರೀಮ್ ಆರ್ಡರ್ ಪ್ಲೇಸ್ ಮಾಡಲಾಗಿದೆ. 195 ರೂಪಾಯಿ ಪಾವತಿಸಿದ್ದಾರೆ. ಕೆಲವೇ ಹೊತ್ತಲ್ಲಿ ಐಸ್ ಕ್ರೀಮ್ ದೀಪಾ ಮನೆ ಸೇರಿದೆ.

ಆದ್ರೆ ಐಸ್ ಕ್ರೀಮ್ ಪ್ಯಾಕ್ ತೆರೆದ ದೀಪಾಗೆ ಅಚ್ಚರಿಯಾಗಿದೆ. ಕಾರಣ ಐಸ್ ಕ್ರೀಮ್‌ನಲ್ಲಿ ಸತ್ತ ಚೇಳೊಂದು ಪತ್ತೆಯಾಗಿದೆ. ಒಂದೆಡೆ ಆತಂಕ, ಆಕ್ರೋಶ ಎಲ್ಲವೂ ಹೆಚ್ಚಾಗಿದೆ. ಕಾರಣ ಐಸ್ ಕ್ರೀಮ್ ಮೇಲಿನ ಭಾಗದಲ್ಲೇ ಚೇಳು ಪತ್ತೆಯಾದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಐಸ್ ಕ್ರೀಮ್ ತಿಂದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

https://x.com/Jyoti_karki_/status/1801919788975046691?ref_src=twsrc%5Etfw

ಐಸ್ ಕ್ರೀಮ್‌ನಲ್ಲಿ ಚೇಳು ಪತ್ತೆಯಾದ ಬೆನ್ನಲ್ಲೇ ವಿಡಿಯೋ ಹಾಗೂ ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಎಲ್ಲೆಡೆ ಹರಿದಾಡಿದೆ. ಆಹಾರಗಳನ್ನು ತಿನ್ನುವ ಮೊದಲು ಎರಡೆರಡು ಬಾರಿ ಪರಿಶೀಲಿಸಿ ಎಂದು ದೀಪಾ ಸಲಹೆ ನೀಡಿದ್ದಾರೆ. ಮಕ್ಕಳಿಗೆ ಆಹಾರ ನೀಡುವಾಗಲೂ ಪ್ಯಾಕ್ ಪರಿಶೀಲಿಸಿ, ನೇರವಾಗಿ ಮಕ್ಕಳಿಗೆ ಕೈಗೆ ನೀಡಬೇಡಿ. ಇದು ನಾನು ಕಲಿತ ಪಾಠ ಎಂದು ಮಹಿಳೆ ಸಲಹೆ ನೀಡಿದ್ದಾರೆ.

ಬ್ಲಿಂಕಿಟ್ ಹಾಗೂ ಅಮೂಲ್ ಮ್ಯಾನೇಜರ್ ಮಹಿಳೆಯನ್ನು ಸಂಪರ್ಕಿಸಿದೆ, ಬ್ಲಿಂಕಿಟ್ ಹಣ ವಾಪಸ್ ನೀಡಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ದೀಪಾ ಈ ಮಾತುಗಳನ್ನು ಅಲ್ಲಗೆಳೆದಿದ್ದಾರೆ. ಯಾರೂ ಕೂಡ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!