ಅಯೋಧ್ಯೆ ಶ್ರೀರಾಮನಿಗೆ ಕಂಬಳಿ ಉಡುಗೊರೆ!

ಹೊಸದಿಗಂತ ವರದಿ, ಧಾರವಾಡ:

ಇಡೀ ವಿಶ್ವವೇ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಎದುರು ನೋಡುತ್ತಿದೆ. ಪ್ರಭು ಶ್ರೀರಾಮನ ಪೂಜೆಗಾಗಿ ಧಾರವಾಡದ ಕುರುಬ ಸಮಾಜದ ಕಂಬಳಿ ಹೋಗುವುದು ಸಂತಸದ ಸಂಗತಿ.

ಹೌದು, ಜ.22ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಕಮಲಾಪುರದ ಪ್ರಗತಿಪರ ರೈತ ಸುಭಾಷ ರಾಯಪ್ಪನವರ ೨ ಕಂಬಳಿ ಉಡುಗೊರೆ ನೀಡಿರುವುದು ವಿಶೇಷ.

ರಾಷ್ಟಿçಯ ಸ್ವಯಂ ಸೇವಕರು ಹಾಗೂ ವೈದ್ಯ ಡಾ. ಎಸ್.ಆರ್.ರಾಮನಗೌಡರ, ಮಾಜಿ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಬುಧವಾರ ರೈತ ಸುಭಾಷ ರಾಯಪ್ಪನವರ ಕಂಬಳಿ ಹಸ್ತಾಂತರಿಸಿದರು.

ಶ್ರೀರಾಮನ ಪೂಜೆಗಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಕಲ್ಲಿದ್ದಲು -ಗಣಿ ಸಚಿವ ಪ್ರಹ್ಲಾದ್ ಜೋಶಿ ಮೂಲಕ ಉಭಯ ಕಂಬಳಿ ತೆಗೆದುಕೊಂಡು ಹೋಗುವ ವ್ಯವಸ್ಥೆಯೂ ಸಹ ಮಾಡಿಲಾಗಿದೆ.

ದೇಸ್ಥಾನದ ಆಡಳಿತ ಮಂಡಳಿಗೆ ಶ್ರೀರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಹಾಗೂ ಪೂಜೆಗೆ ಈ ಕಂಬಳಿ ಬಳಸುವುದರಿಂದ ಉತ್ತರ ಕರ್ನಾಟಕದ ಕೀರ್ತಿ ಪತಾಕೆ ಎಲ್ಲಡೆ ಪಸರಿಸುವುದು ಸಂತಸದ ವಿಷಯ.

ಸೋಮಶೇಖರಗೌಡ ಪಾಟಿಲ, ಗುರುನಾಥ ಹೊನ್ನನ್ನವರ, ಯಲ್ಲಪ್ಪ ಹೊಟ್ಟಿ, ಈರಪ್ಪ ಗೌಡಪ್ಪನವರ, ಉಳವಪ್ಪ ಅನಾಡ, ಮುರುಗೇಶ ಬಾಳಗಿ, ಈರಯ್ಯ ರಾಮಯ್ಯನವ, ಚಂದ್ರು ಗುಮಗೋಳಮಠ, ಬಸು ಬಾಳಗಿ, ನಿರ್ಮಲ ಕನ್ನಿನಾಯ್ಕರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!