August 4, 2026
Tuesday, August 4, 2026
spot_img

ಕಮ್‌ಬ್ಯಾಕ್‌ನಲ್ಲೇ ಬ್ಲಾಕ್‌ಬಸ್ಟರ್: ಸ್ಯಾಮ್ ಸಿನಿಮಾಗೆ ಪ್ರೇಕ್ಷಕರ ಫುಲ್ ಮಾರ್ಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀರ್ಘ ವಿರಾಮದ ಬಳಿಕ ನಟಿ ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಗಳಿಕೆ ದಾಖಲಿಸಿ, ಸಮಂತಾ ಅವರ ಕಮ್‌ಬ್ಯಾಕ್‌ಗೆ ಮತ್ತಷ್ಟು ಬಲ ನೀಡಿದೆ.

ಮೊದಲ ದಿನದಿಂದಲೇ ಭರ್ಜರಿ ಓಟ

ನಂದಿನಿ ರೆಡ್ಡಿ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಮೊದಲ ದಿನವೇ ಉತ್ತಮ ಆರಂಭ ಕಂಡಿತ್ತು. ಕೌಟುಂಬಿಕ ಭಾವನೆಗಳ ಜೊತೆಗೆ ಆಕ್ಷನ್‌ ಅಂಶಗಳ ಸಂಯೋಜನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಚಿತ್ರವು ಈಗಾಗಲೇ 73 ಕೋಟಿ ರೂಪಾಯಿಗೂ ಅಧಿಕ ವಿಶ್ವವ್ಯಾಪಿ ಕಲೆಕ್ಷನ್ ದಾಖಲಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ:

OTTಗೂ ಹೆಚ್ಚಿದ ನಿರೀಕ್ಷೆ

ಚಿತ್ರದ ಯಶಸ್ಸಿನೊಂದಿಗೆ OTT ಬಿಡುಗಡೆಯ ಬಗ್ಗೆಯೂ ಕುತೂಹಲ ಹೆಚ್ಚಿದೆ. ಥಿಯೇಟರ್ ಪ್ರದರ್ಶನ ಮುಗಿದ ಬಳಿಕ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಆರಂಭದಲ್ಲಿ ಡಿಜಿಟಲ್ ವೇದಿಕೆಯಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

100 ಕೋಟಿ ಕ್ಲಬ್‌ ಗುರಿ

ದೇಶೀಯ ಮಾರುಕಟ್ಟೆಯ ಜೊತೆಗೆ ವಿದೇಶದಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಮಂತಾ ನಿರ್ಮಾಪಕಿ ಹಾಗೂ ನಾಯಕಿಯಾಗಿ ಹೊಸ ಯಶಸ್ಸು ದಾಖಲಿಸಿರುವ ಈ ಚಿತ್ರ, ಶೀಘ್ರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಎಂಬ ನಿರೀಕ್ಷೆ ಸಿನಿ ವಲಯದಲ್ಲಿ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !