ಹೊಸದಿಗಂತ ಡಿಜಿಟಲ್ ಡೆಸ್ಕ್:
4ನೇ ತರಗತಿಯ ಬಾಲಕ ತನ್ನ ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಉರುಳು ಬಿದ್ದು ಸಾವನ್ನಪ್ಪಿರುವ ಘಟನೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ.
ಪಿ.ಜೆ.ಕೊಟ್ರೇಶಿ (13) ಮೃತ ಬಾಲಕ. ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಕೊಟ್ರೇಶಿ ಶಾಲೆಯಿಂದ ಮನೆಗೆ ಮರಳಿದ್ದ. ಎಂದಿನಂತೆ ಮನೆಯಲ್ಲಿ ಕಟ್ಟಿದ್ದ ಜೋಕಾಲಿ ಮೇಲೆ ಕುಳಿತು ಆಟವಾಡುತ್ತಿದ್ದ.
ಈ ವೇಳೆ ಆಕಸ್ಮಿಕವಾಗಿ ಜೋಕಾಲಿ ಉರುಳು ಬಿದ್ದಿದೆ. ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.