ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಝಿಪ್‌ಲೈನ್ ಟ್ರೆಂಡಿಯಾಗಿದೆ, ಎಲ್ಲಿ ಹೋದರೂ ಸಣ್ಣದಾದರೂ ಪರವಾಗಿಲ್ಲ ಒಂದು ಝಿಪ್‌ಲೈನ್ ಇದ್ದೇ ಇರುತ್ತದೆ, ಇದು ಟೂರಿಸ್ಟ್ ಸ್ಥಳಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ.
ಧೈರ್ಯವಾಗಿ ಝಿಪ್ ಲೈನ್ ಏರುವವರಿಗೆ ಒಂದು ಬಾರಿಯಾದ್ರೂ ಇಲ್ಲಿಂದ ಬಿದ್ದುಬಿಟ್ರೆ ಅನ್ನೋ ಭಯ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬ ಆರು ವರ್ಷದ ಪುಟಾಣಿ ಝಿಪ್‌ಲೈನ್ ಮಾಡೋಕೆ ಹೊರಟಿದ್ದಾನೆ.
ಖುಷಿಯಿಂದ ಆತ ಝಿಪ್‌ಲೈನ್ ಮಾಡುತ್ತಿದ್ದು, ಆತನ ಪೋಷಕರು ಅವನನ್ನು ನೋಡುತ್ತಾ ಭೇಷ್ ಎಂದು ಕೂಗುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ 40ಅಡಿ ಎತ್ತರದಿಂದ ಪುಟಾಣಿ ಕೆಳಕ್ಕೆ ಬಿದ್ದಿದ್ದಾನೆ. ಈ ಭಯಾನಕ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮೆಕ್ಸಿಕೋದ ಮಾಂಟೆರ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ಇದಾಗಿದೆ. ಅದೃಷ್ಟವಶಾತ್ ಬಾಲಕನ ಪ್ರಾಣ ಉಳಿದಿದೆ. ಸಣ್ಣ ಪುಟ್ಟ ಗಾಯಗಳು ಮಾತ್ರ ಆಗಿದ್ದು, ಆದ ಚೇತರಿಸಿಕೊಳ್ಳುತ್ತಿದ್ದಾನೆ.
https://twitter.com/1Around_theworl/status/1673447114842550272?s=20