March 30, 2026
Monday, March 30, 2026
spot_img

ದಾಂಡೇಲಿಯಲ್ಲಿ ಬಾಲಕನ ಮೇಲೆ ಬೀದಿನಾಯಿ ದಾಳಿ, ಆಸ್ಪತ್ರೆಗೆ ದಾಖಲು

ಹೊಸದಿಗಂತ ವರದಿ ದಾಂಡೇಲಿ :

ನಗರದ ಹಳಿಯಾಳ ರಸ್ತೆಯ ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.

ಹಳಿಯಾಳ ರಸ್ತೆಯ ಶಾರುಖ್ ಸೈಯದ್ ಎಂಬಾತನೇ ಬೀದಿನಾಯಿ ದಾಳಿಗೊಳಗಾಗಿ ಗಾಯಗೊಂಡ ಬಾಲಕನಾಗಿದ್ದಾನೆ. ಈತ 3ನಂ ಗೇಟ್ ನಿಂದ ಕಾಗದ ಕಾರ್ಖಾನೆಯ ಗಾರ್ಡನ್ ಹತ್ತಿರ ಬರುತ್ತಿದ್ದಾಗ ಬೀದಿನಾಯಿಯೊಂದು ಏಕಾಏಕಿ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಬಾಲಕನನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ಚಿಕಿತ್ಸೆಯನ್ನು ನೀಡಲಾಗಿದೆ.

ಕಳೆದ ಒಂದುವರೆ ವರ್ಷಗಳಿಂದ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಳವಾಗಿದ್ದು, ಮಕ್ಕಳು, ಹಿರಿಯರೆನ್ನದೆ ಕಚ್ಚಿ ಗಾಯಗೊಳಿಸಿದ ಘಟನೆಗಳು ಸಾಕಷ್ಟು ಬಾರಿ ನಡೆದಿರುವುದನ್ನು ಇಲ್ಲಿ‌ ನೆನಪಿಸಿಕೊಳ್ಳಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !