ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗ್ರಾದ ಅಲಿಗಢದಲ್ಲಿ ಎಂದೂ ಕೇಳಿರದ ಘೋರ ಘಟನೆಯೊಂದು ನಡೆದಿದೆ. 11 ತಿಂಗಳ ಮಗುವಿನ ಮೇಲೆ 12 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾನೆ.
ಈಗಿನ್ನು ಅಪ್ಪ ಅಮ್ಮ ಯಾರು ಎಂದು ಗುರುತಿಸುವಷ್ಟೇ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿ ಬಾಲಕ ಪರಾರಿಯಾಗಿದ್ದಾನೆ. ಪಕ್ಕದ ಮನೆಯಲ್ಲೇ ವಾಸವಿದ್ದ ಬಾಲಕ ಮಗುವಿನ ಜೊತೆ ಆಟ ಆಡಲು ಆಗಾಗ ಬರುತ್ತಿದ್ದ. ನಾನು ಬೇರೆ ಕೆಲಸದಲ್ಲಿ ನಿರತನಾಗಿದ್ದಾಗ ಮಗುವನ್ನು ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಮಗುವಿನ ಅಳುವಿನ ಸದ್ದು ಕೇಳಿ ತಾಯಿ ಟೆರೇಸ್ಗೆ ಬಂದಿದ್ದಾರೆ. ಆ ವೇಳೆ ಮಗುವಿಗೆ ರಕ್ತಸ್ರಾವವಾಗುತ್ತಿತ್ತು ಎಂದು ತಾಯಿ ಹೇಳಿದ್ದಾರೆ.
ಬಾಲಕನ ವಿರುದ್ಧ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.