ಹೊಸ ದಿಗಂತ ವರದಿ,ಹುಬ್ಬಳ್ಳಿ:
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿವೋರ್ವನ ಮೇಲೆ ಸಂಬಂಧಿಯೊಬ್ಬ ಕುಡಗೊಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಇಲ್ಲಿಯ ಉಣಕಲ್ ಬಾರಕೇರ ಓಣಿಯಲ್ಲಿ ನಡೆದಿದೆ.
ಸಿದ್ದು ಬಾರಕೇರ(೨೫) ಮೇಲೆ ಅವರ ಸಂಬಂಧಿ ಶೇಖರ ಎಂಬಾತ ಹಲ್ಲೆ ಮಾಡಿದ್ದಾನೆ. ಹಳೇ ದ್ವೇಷದ ಹಿನ್ನೆಲೆ ಸಿದ್ದು ಬಾರಕೇರ ಮೇಲೆ ಅವರ ಚಿಕ್ಕಪ್ಪ ಶೇಖರ ಎಂಬುವರು ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಆತನನ್ನು ನಗರದ ಕೆಎಂಸಿಆರ್ ಐ ಆಸ್ಪತ್ರೆ ಗೆ ಚಿಕಿತ್ಸೆ ರವಾನಿಸಲಾಗಿದೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.



