August 31, 2026
Monday, August 31, 2026
spot_img

ಮುಂಡಗೋಡ । ಗದ್ದೆಗೆ ತೆರಳುತ್ತಿದ್ದ ವೇಳೆ ಕರಡಿ ದಾಳಿ: ರೈತನ ತಲೆ, ಕೈ, ಕಾಲುಗಳಿಗೆ ಗಾಯ

ಹೊಸ ದಿಗಂತ ವರದಿ, ಮುಂಡಗೋಡ:

ಗದ್ದೆಗೆ ತೆರಳುತ್ತಿದ್ದ ವೇಳೆ ರೈತನ ಮೇಲೆ ಕರಡಿವೊಂದು ದಾಳಿ ನಡೆಸಿ ತೀವ್ರ ಗಾಯಗೊಳಿಸಿದ ಘಟನೆ ತಾಲೂಕಿನ ಹಿರೇಹಳ್ಳಿ ಗ್ರಾಮದ ಸಮೀಪ ಭಾನುವಾರ ನಡೆದಿದೆ.

ಹಿರೇಹಳ್ಳಿ ಗ್ರಾಮದ ರಹೀಮಖಾನ್ ಪಾಳಾ ಎಂಬಾತನು ಗಾಯಗೊಂಡ ರೈತ. ಹಿರೇಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗದ್ದೆಗೆ ಅರಣ್ಯ ಮಾರ್ಗವಾಗಿ ತೆರಳುತ್ತಿರುವಾಗ ಕರಡಿ ದಾಳಿ ನಡೆಸಿ ತಲೆ, ಕೈ, ಕಾಲುಗಳಿಗೆ ಗಾಯಗೊಳಿಸಿದೆ. ಗಾಯಗೊಂಡ ಗಾಯಾಳುವನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !