ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಮಹಿಳಾ ಶೂಟರ್ ಮನು ಭಾಕರ್ ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಇದರಿಂದ ಅಕ್ಟೋಬರ್ನಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ನಿಂದ ಹೊರಕ್ಕೆ ಉಳಿಯಲಿದ್ದಾರೆ ಎಂದು ಅವರ ಕೋಚ್ ಜಸ್ಪಾಲ್ ರಾಣಾ ಮಾಹಿತಿ ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 22 ವರ್ಷದ ಭಾಕರ್ ಅವರು ಎರಡು ಪದಕ ಗೆದ್ದು ಇತಿಹಾಸ ಬರೆದಿದ್ದರು.
ಮಂಗಳವಾರ ಮುಂಜಾನೆ ಪ್ಯಾರಿಸ್ನಿಂದ ಹಿಂದಿರುಗಿದ ಮನು ಭಾಕರ್ ಕ್ರೀಡೆಯಿಂದ ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅವರು ಮೂರು ತಿಂಗಳ ವಿರಾಮ ತೆಗೆದುಕೊಳ್ಳುತ್ತಿರುವುದರಿಂದ ಅಕ್ಟೋಬರ್ನಲ್ಲಿ ಡೆಯಲಿರುವ ಶೂಟಿಂಗ್ ವಿಶ್ವಕಪ್ನಲ್ಲಿ ಭಾಗವಹಿಸುತ್ತಾರೆಯೇ ಎಂದು ನನಗೆ ಖಚಿತವಿಲ್ಲ. ಇದು ಸಾಮಾನ್ಯ ವಿರಾಮ. ಬಹಳ ಸಮಯದಿಂದ ಅವರು ತರಬೇತಿ ಪಡೆಯುತ್ತಿದ್ದಾರೆ ರಾಣಾ ತಿಳಿಸಿದ್ದಾರೆ.
ಅಕ್ಟೋಬರ್ 13 ರಿಂದ 18 ರವರೆಗೆ ದೆಹಲಿಯಲ್ಲಿ ಶೂಟಿಂಗ್ ವಿಶ್ವ ಕಪ್ ಆಯೋಜನೆಗೊಂಡಿದೆ.