ಹೊಸದಿಗಂತ ಯಲ್ಲಾಪುರ :
ತಾಲೂಕಿನ ಅರಬೈಲ್ ಘಟ್ಟದಲ್ಲಿ ರಸ್ತೆ ಮಧ್ಯೆ ವಾಹನ ಹಾಳಾಗಿ ರಸ್ತೆ ಬದಿಗೆ ನಿಲ್ಲಿಸಲಾಗದೆ ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿರುವದರಿಂದಾ ಅ 2 ರ ರಾತ್ರಿ 12.30 ಯಿಂದಾ ಅ 3 ಬೆಳಗಿನ ಜಾವದವರೆಗೂ ಟ್ರಾಫಿಕ್ ಜಾಮ್ ಆಗಿದ್ದರಿಂದ ನಸುಗತ್ತಲು 3ಗಂಟೆಗೆ ತಲುಪಬೇಕಾಗಿದ್ದ ಹಾಲು, ಪತ್ರಿಕೆ, ತರಕಾರಿ ಇತ್ಯಾದಿ ಹೊತ್ತೋಯ್ಯುತ್ತಿದ್ದ ವಾಹನಗಳು ಬೆಳಿಗ್ಗೆ7 ಗಂಟೆಗೆ ತಲುಪಿವೆ.
ರವಿವಾರ ಸಂತೆ ದಿನವಾದ್ದರಿಂದ ತರಕಾರಿ ಹೂವು ಹಣ್ಣು, ಮಾರಾಟಗಾರರು ಪರಿತಪಿಸುವಂತಾಗಿತ್ತು.
ಟ್ರಾಫಿಕ್ ಜಾಮ್ ನಿಭಾಯಿಸಲು ಪೋಲಿಸರು ಸ್ಥಳದಲ್ಲಿ ಇರಲಿಲ್ಲ ಎಂದು ವಾಹನ ಚಾಲಕರು ತಿಳಿಸಿದ್ದಾರೆ.