ಹೊಸದಿಗಂತ ವರದಿ ಕೊಪ್ಪಳ:
ಗಂಗಾವತಿ ನಗರದ ವಡ್ಡರಹಳ್ಳಿ ಬಳಿ ಸೋಮವಾರ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಟಿವಿಎಸ್ ಗಾಡಿಗೆ ಕೆಕೆಆರ್ಡಿಬಿ ಬಸ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ 10.30ಕ್ಕೆ ವಡ್ಡರಹಟ್ಟಿ ಬಳಿ ಅಪಘಾತ ಸಂಭವಿಸಿದೆ. ಕೆಕೆಆರ್ಟಿಸಿ ಬಸ್ (KA 37 F0955) ಲಾರಿಯನ್ನು ಹಿಂದಕ್ಕೆ ಹಾಕಲು ಹೋಗಿ ಮುಂದೆ ಬರುತ್ತಿದ್ದ ಟಿವಿಎಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಸವಾರನ ತಲೆಗೆ ಪೆಟ್ಟು ಬಿದ್ದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.