ಹೊಸದಿಗಂತ ವರದಿ,ಶಿರಸಿ:
ಕಳೆದ ತಿಂಗಳು ತಾಲೂಕಿನ ಅಂಡಗಿ ಬಳಿ ಚಾಕು ಚೂರಿ ತೋರಿಸಿ ಲಕ್ಷಾಂತರ ರೂಪಾಯಿ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಗರದ ಆಸಿಫ್ ಸತ್ತಾರ್,ಅಬ್ದುಲ್ ಸತ್ತಾರ್, ಮನ್ಸೂರ್ ಜಾಪರ್ ಖಾನ್, ನೆಜ್ಜೂರಿನ ಅಜಿಮುಲ್ಲಾ ಸಾಬ್,ಭಟ್ಕಳದ ಅಬ್ದುಲ್ ರೆಹಮಾನ್ ವಟರಾಗ, ಚಿಕ್ಕಮಗಳೂರಿನ ರಿಯಾಜ್ ಫಯಾಜ್, ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ಹಾಗೂ ತೀರ್ಥಹಳ್ಳಿಯ ಇಕ್ಬಾಲ್ ಅಬ್ದುಲ್ ಕೆ, ಬಂಧಿತ ಆರೋಪಿಗಳು. ಅಕ್ಟೋಬರ್ 19 ರಂದು ಅಂಡಗಿ ಬಳಿ ಹಸನ್ ಖಾನ್ ಎಂಬುವವರಿಗೆ ಸೇರಿದ 50 ಲಕ್ಷ ರೂಪಾಯಿಗಳನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಹಣದೋಚಿ ಪರಾರಿಯಾಗಿದ್ದರು, ಕಾರಿಗೆ ಅಳವಡಿಸಿದ್ದ ಜಿಪಿಎಸ್ ಟ್ರಾಕರ್ ಸಹಾಯದಿಂದ ದರೊಡೆ ನಡೆಸಿದ್ದರು. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಶನಿವಾರ 9 ಜನ ಅಂತರ್ ಜಿಲ್ಲಾ ದರೊಡೆಕೊರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿ ಇದ್ದ 13 ಲಕ್ಷ ರೂ. ಹಣವನ್ನು ಜಪ್ತು ಮಾಡಲಾಗಿದೆ.
ಬಂಧಿತರಿಂದ 13.82 ಲಕ್ಷರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ ಒಂದು ರಿಡ್ಜ್ ಹಾಗೂ ಒಂದು ಓಮಿನಿ ಮತ್ತು 12 ಮೊಬೈಲ್ ಹಾಗೂ ಒಂದು ಜಿ.ಪಿ.ಎಸ್.ಟ್ರಾಕರ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳ ಪತ್ತೆ ಹಾಗೂ ನಗದು ಜಪ್ತು ಬಾಕಿ ಇದ್ದು ತನಿಖೆ ಮುಂದುವರೆದಿದೆ.
ಪತ್ತೆ ಕಾರ್ಯದಲ್ಲಿ ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ,ಪಿಎಸ್‍ಐ ಗಳಾದ ಹನಮಂತ ಬಿರದಾರ,ಭೀಮಾಶಂಕರ, ಚಂದ್ರಕಲಾ ಪತ್ತಾರ್, ಸಿಬ್ಬಂದಿಗಳಾದ ಕೊಟೇಶ್ ನಾಗರವಳ್ಳಿ,ರಾಘವೇಂದ್ರ ಜಿ, ಶಿವರಾಜ ಎಸ್,ಚಂದ್ರಪ್ಪ ಕೊರವರ್,ಪ್ರಶಾಂತ ಪಾವಸ್ಕರ್, ಮಹಾಂತೇಶ್ ಬಾರಕೆರ್, ನಾಗಪ್ಪ ಒಣಿಕೇರಿ,ಗುರುರಾಜ ಸಿ, ಮಂಜುನಾಥ ಬಿ, ರಾಮಯ್ಯ ಪೂಜಾರಿ,ಬಸವರಾಜ ಜಾಢರ್, ಹನುಮಂತ ಮಾಕಾಪುರ,ಅಶೋಕ ನಾಯ್ಕ,ಜಿಮ್ಮು ಶಿಂಧೆ,ಕುಮಾರ್ ಬಣಕಾರ, ರಮೇಶ್ ನಾಯ್ಕ,ಉದಯ ಗುನಗಾ, ರಾಜೇಶ್ ನಾಯ್ಕ,ರಾಮದೇವ್ ಗಾಂವಕರ್, ವೆಂಕಟೇಶ ನಾಯಕ, ಬಸವರಾಜ ಮ್ಯಾಗೇರಿ, ಪ್ರವೀಣ ,ಮಾದೇವ,ಸಂತೋಷ ತಳವಾರ,ಹಾಗೂ ಪಾಂಡುರಂಗ ನಾಗೋಜಿ ಭಾಗಿಯಾಗಿದ್ದರು.