ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಸಿರಸ್‌ಪುರದಲ್ಲಿ ಪಕ್ಕದ ಮನೆಗೆ ತೆರಳಿ ಕರ್ಕಶ ಶಬ್ದ ನಿಲ್ಲಿಸಿ ಎಂದು ಗರ್ಭಿಣಿ ಹೇಳಿದ್ದಕ್ಕೆ ಆಕೆಯ ಮೇಲೆ ಗುಂಡು ಹಾರಿಸಲಾಗಿತ್ತು.
ಸ್ಥಳದಲ್ಲೇ ಆಕೆಗೆ ಗರ್ಭಪಾತವಾಗಿದ್ದು, ಆಕೆಯ ಸ್ಥಿತಿಯೂ ಗಂಭೀರವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.
ಆರೋಪಿ ಹರೀಶ್‌ನನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಪಕ್ಕದ ಮನೆಯಲ್ಲಿ ಪಾರ್ಟಿ ವೇಳೆ ಕರ್ಕಶ ಶಬ್ದ ಬರುತ್ತಿದ್ದು, ನಿದ್ದೆ ಮಾಡಲು ಸಾಧ್ಯವಾಗದೇ ಹಾಗೂ ಮಗುವಿಗೆ ತೊಂದರೆಯಾಗುವ ಭಯದಿಂದ ರಂಜು ಶಬ್ದ ಕಡಿಮೆ ಮಾಡುವಂತೆ ಹೇಳಿದ್ದಾರೆ.
ತಕ್ಷಣ ಸಿಟ್ಟಿಗೆದ್ದ ಹರೀಶ್ ತನ್ನ ಸ್ನೇಹಿತನ ಗನ್ ಪಡೆದು ಕುತ್ತಿಗೆಗೆ ಗುಂಡು ಹಾರಿಸಿದ್ದಾರೆ. ಶೂಟ್ ಮಾಡಿದ ರಭಸಕ್ಕೆ ರಂಜು ಕೆಳಕ್ಕೆ ಬಿದ್ದಿದ್ದು, ಗರ್ಭಪಾತವಾಗಿತ್ತು.