ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಡಿಯೋ ಕಾಲ್‌ನಲ್ಲಿ ಹೆಂಡತಿಯನ್ನು ತೋರಿಸೋದಿಲ್ಲ ಎಂದ ಸಹೋದ್ಯೋಗಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಸುರೇಶ್ ಹಾಗೂ ರಾಜೇಶ್ ಮಿಶ್ರಾ ಕೆಲಸ ಮಾಡುತ್ತಿದ್ದರು. ರಾಜೇಶ್ ಮಿಶ್ರಾ ತನ್ನ ಪತ್ನಿಯ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದರು.
ಆ ವೇಳೆ ಸುರೇಶ್ ಬಂದು, ವಿಡಿಯೋ ಕಾಲ್ ಮಾಡಿ ನಿನ್ನ ಪತ್ನಿಯನ್ನು ತೋರಿಸಿ ಎಂದು ಪಟ್ಟು ಹಿಡಿದಿದ್ದ. ನನ್ನ ಪತ್ನಿಯನ್ನು ನಿಮಗ್ಯಾಕೆ ತೋರಿಸಬೇಕು ಎಂದು ರಾಜೇಶ್ ಕೇಳಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದ ಜಗಳ ತಾರಕಕ್ಕೇರಿದ್ದು, ಅಲ್ಲೇ ಇದ್ದ ಬಟ್ಟೆ ಕತ್ತರಿಯಿಂದ ರಾಜೇಶ್ ಹೊಟ್ಟೆಗೆ ಸುರೇಶ್ ಇರಿದಿದ್ದಾನೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಸುರೇಶ್‌ನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.