ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಗೀತಾ ಶಿವರಾಜಕುಮಾರ್ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇದೀಗ ಪತ್ನಿ ಪರ ನಟ ಶಿವರಾಜ್‌ಕುಮಾರ್ ಅವರು ಪ್ರಚಾರಕ್ಕೆ ನಿಂತಿದ್ದಾರೆ.
ಗೀತಾ ಹುಟ್ಟಿದ್ದು ಬಂಗಾರಪ್ಪನವರ ಕುಟುಂಬದಲ್ಲಿ. ಇವರು ಶಿವಮೊಗ್ಗ ಜಿಲ್ಲೆಯವರು. ಅವರನ್ನು ಶ್ರೇಷ್ಠ ನಾಯಕ ಎಂದು ಪರಿಗಣಿಸಲಾಗಿತ್ತು. ಗೀತಾ ಹುಟ್ಟಿದ್ದು ಇಲ್ಲೇ ಓದಿದ್ದು ಇಲ್ಲೇ. ಅವರ ಮನೆ ಇಲ್ಲಿ ಇಲ್ಲ ಅಂತ ನೀವು ಹೇಳೋಕೆ ಆಗಲ್ಲ. ಹಾಗಂತ 365 ದಿನ ಅವರು ಇಲ್ಲಿಯೇ ಇರಬೇಕು ಅಂತೇನೂ ಇಲ್ಲ. ಈಗ ಇರುವ ಸೌಲಭ್ಯಕ್ಕೆ ಅಮೆರಿಕದಲ್ಲಿ ಕುಳಿತು ಆಪರೇಷನ್ ಮಾಡುತ್ತಾರೆ.
ಹಾಗಿರುವಾಗ ಎಲ್ಲಿದ್ದರೂ ಕೆಲಸ ಮಾಡಬಹುದು. ಗೀತಾ ಏನು ಮಾಡಬೇಕು ಎಂಬುದನ್ನು ನೀವು ಹೇಳಬೇಕು. ಅವರಿಗೂ ಅದು ತಿಳಿದಿದೆ. ಎಲ್ಲ ಸಮಸ್ಯೆಗಳನ್ನು ಕೇಳಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಕುಳಿತುಕೊಂಡು ಸಮಸ್ಯೆ ಬಗೆಹರಿಸುತ್ತಾರೆ. ಎಲ್ಲರಿಗೂ ಒಂದು ಮೊದಲ ಅವಕಾಶ ಅಂತ ಬರುತ್ತದೆ. ಎಲ್ಲರೂ ಹೊಸಬರೇ ಆಗಿದ್ದರೆ ಗೊಂದಲ ಆಗಬಹುದು ಎಂದು ಹೇಳಿದ್ದಾರೆ.