ಈ ದೇಶದಲ್ಲಿ ಲಿಂಗ-ಪರಿವರ್ತನೆ ಸಂಪೂರ್ಣ ಬ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾದಲ್ಲಿ ಲಿಂಗ-ಪರಿವರ್ತನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಈ ಕುರಿತು ಸರಕಾರ ವಿಧೇಯಕವನ್ನು ಸಂಸತ್ತಿನ ಎರಡೂ ಮನೆಯಲ್ಲಿ ಮಂಡಿಸಿದ್ದು, ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russian President Vladimir Putin) ಅವರೂ ಅಂಕಿತ ಹಾಕಿದ್ದಾರೆ. ಈ ಮೂಲಕ ವ್ಯಕ್ತಿಯ ಲಿಂಗವನ್ನು ಬದಲಿಸುವ ಯಾವುದೇ ವೈದ್ಯಕೀಯ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.

ಸಂಸತ್ತಿನ ಎರಡೂ ಸದನಗಳಿಂದ ಸರ್ವಾನುಮತದಿಂದ ಅಂಗೀಕರಿಸಲಾಗಿರುವ ವಿಧೇಯಕವು ಯಾವುದೇ ವ್ಯಕ್ತಿಯ ಲಿಂಗವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ನಿಷೇಧಿಸುತ್ತದೆ. ಜತೆಗೆ ಅಧಿಕೃತ ದಾಖಲೆಗಳು ಮತ್ತು ಸಾರ್ವಜನಿಕ ದಾಖಲೆಗಳಲ್ಲಿ ಒಬ್ಬರ ಲಿಂಗವನ್ನು ಬದಲಾಯಿಸುವುದನ್ನು ನಿರ್ಬಂಧಿಸಲಾಗಿದೆ. ಜನ್ಮಜಾತ ವೈಪರೀತ್ಯಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಮಧ್ಯಸ್ಥಿಕೆಗೆ ಮಾತ್ರ ವಿನಾಯ್ತಿ ನೀಡಲಾಗಿದೆ.

ಅದೇ ರೀತಿ ಲಿಂಗ ಬದಲಿಸಿಕೊಂಡ ಆಗುವ ವಿವಾಹದ ಕಾನೂನು ರದ್ದು ಮಾಡುತ್ತದೆ. ಈ ಸಮುದಾಯದ ಜನರು ಮಕ್ಕಳನ್ನು ದತ್ತು ಪಡೆದುಕೊಂಡು ಪೋಷಕರಾಗುವುದನ್ನು ತಡೆಯುತ್ತದೆ.

ಆದ್ರೆ ಇದೀಗ ರಷ್ಯಾ ಜಾರಿಗೆ ತಂದಿರುವ ಈ ಕಾಯಿದೆ ಸಂಪೂರ್ಣವಾಗಿ ಎಲ್‌ಜಿಬಿಟಿಕ್ಯೂ ಸಮುದಾಯದ ಹಿತಾಸಕ್ತಿಗಳ ವಿರುದ್ಧವಾಗಿದೆ.ಎಲ್‌ಜಿಬಿಟಿಕ್ಯೂ ಸಮುದಾಯದ ವಿರುದ್ಧ ಪುಟಿನ್ ಅವರು ಹತ್ತು ವರ್ಷಗಳ ಹಿಂದಿನಿಂದಲೇ ಯುದ್ಧ ಸಾರಿದ್ದಾರೆ. ಸಾಂಪ್ರದಾಯಿಕ ಕುಟುಂಬದ ಮೌಲ್ಯಗಳ ಉಳಿವಿಗೆ ಇದು ಅಗತ್ಯ ಎಂದು ಅವರು ಭಾವಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!