ಹೊಸ ದಿಗಂತ ವರದಿ,ಕಾರವಾರ:
ತಾಲೂಕಿನಿಂದ 50 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ವಾಣಿಜ್ಯ ಹಡಗೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಇತರ ಹಡಗುಗಳು ಮತ್ತು ಹೆಲಿಕಾಪ್ಟರ್ ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗುಜರಾತ್ ಬಂದರಿನಿಂದ ಕಂಟೇನರ್ ಗಳನ್ನು ತುಂಬಿ ಶ್ರೀಲಂಕಾದ ಕೊಲೊಂಬೊಗೆ ತೆರಳುತ್ತಿದ್ದ ಪನಾಮಾ ಧ್ವಜದ ಎಂ.ವಿ.ಮರೈನ್ ಪ್ರಾಂಕ್ ಫರ್ಟ್ ಎಂಬ ಹೆಸರಿನ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಡಗಿನಲ್ಲಿರುವ ಕಂಟೇನರ್ ಗಳಿಗೆ ಬೆಂಕಿ ಆವರಿಸಿದೆ.
ಕೋಸ್ಟ್ ಗಾರ್ಡಿಗೆ ಸೇರಿದ ಸುಜೀತ್, ಸಚೇತ್ ಮತ್ತು ಸಾಮ್ರಾಟ್ ಹಡಗುಗಳ ಮೂಲಕ ಬೆಂಕಿ ನಿಯಂತ್ರಣಕ್ಕೆ ತರುವ ಕಾರ್ಯ ನಡೆದಿದ್ದು ಗೋವಾ ಕೋಸ್ಟ್ ಗಾರ್ಡ್ ನಿಂದ ವೈಮಾನಿಕ ರಕ್ಷಣಾ ಕಾರ್ಯಾಚರಣೆ ಸಹ ನಡೆಯುತ್ತಿದೆ ಎಂದು ತಿಳಿದು ಬಂದಿದೆ.