CINE | ಪುಷ್ಪ 2’ ಚಿತ್ರದಿಂದ ಬಿಡುಗಡೆ ಆಗಲಿದೆ ಕಪಲ್ ಸಾಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪುಷ್ಪ2 ಸಿನಿಮಾ ಟೀಂ ಕಡೆಯಿಂದ ಮತ್ತೊಂದು ಅಪ್‌ಡೇಟ್‌ ಸಿಕ್ಕಿದೆ. ಪುಷ್ಪ ಸಿನಿಮಾದ ಮತ್ತೊಂದು ಹಾಡು ನಾಳೆ ರಿಲೀಸ್‌ ಆಗಲಿದೆ. ಈ ಬಗ್ಗೆ ಟೀಂ ಖುಷಿ ಹಂಚಿಕೊಂಡಿದೆ.

ತೆಲುಗಿನಲ್ಲಿ ‘ಸೂಸೆಕಿ..’ ಎಂದಿದ್ದು, ಕನ್ನಡದಲ್ಲಿ ‘ನೋಡೋಕ..’ ಟೈಟಲ್ ಕೊಡಲಾಗಿದೆ. ಪುಷ್ಪ’ ಚಿತ್ರ ತೆಲುಗಿನ ಜೊತೆಗೆ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ರಿಲೀಸ್ ಆಗಿತ್ತು. ‘ಪುಷ್ಪ 2’ ಚಿತ್ರ ಈ ಐದು ಭಾಷೆಗಳ ಜೊತೆಗೆ ಬೆಂಗಾಲಿ ಭಾಷೆಯಲ್ಲೂ ಬಿಡುಗಡೆ ಆಗಲಿದೆ. ಈ ಚಿತ್ರದ ರಿಲೀಸ್​ಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಒಂದೊಂದಾಗಿ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ‘ನೋಡೋಕ..’ ಹಾಡು ಯಾವ ರೀತಿಯಲ್ಲಿ ಮ್ಯಾಜಿಕ್ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.

‘ನೋಡೋಕ’ ಹಾಡಿಗೆ ರಾಕ್​ಸ್ಟಾರ್ ದೇವಿಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಶ್ರೇಯಾ ಘೋಷಾಲ್ ಅವರು ಹಾಡಿದ್ದಾರೆ. ಈ ಹಾಡನ್ನು ಚಿತ್ರತಂಡ ‘ದಿ ಕಪಲ್ ಸಾಂಗ್’ ಎಂದು ಕರೆದಿದೆ. ಈ ಹಾಡಿನ ಪೋಸ್ಟರ್ ಗಮನ ಸೆಳೆದಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಒಟ್ಟಾಗಿ ನಿಂತಿದ್ದಾರೆ. ರಶ್ಮಿಕಾ ಮೊಗದಲ್ಲಿರೋ ನಗು ಗಮನ ಸೆಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!