ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾದಕ ದ್ರವ್ಯಕ್ಕಾಗಿ ತಮ್ಮ ಇಬ್ಬರು ಮಕ್ಕಳನ್ನು ₹ 74 ಸಾವಿರಕ್ಕೆ ಮಾರಾಟ ಮಾಡಿದ್ದ ದಂಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ದಂಪತಿಯನ್ನು ಶಬ್ಬಿರ್ ಖಾನ್ ಹಾಗೂ ಸಾನಿಯಾ ಖಾನ್ ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಮಕ್ಕಳ ಮಾರಾಟಕ್ಕೆ ನೆರವು ನೀಡಿದ್ದ ಶಕೀಲ್ ಮತ್ತು ಉಷಾ ಎಂಬುವರನ್ನೂ ಬಂಧಿಸಲಾಗಿದೆ.
ಮಕ್ಕಳನ್ನು ಮಾರಾಟ ಮಾಡಿದ್ದ ದಂಪತಿ ಮಾದಕ ವಸ್ತು ವ್ಯಸನಿಗಳಾಗಿದ್ದರು. ಇವರು ಡ್ರಗ್ಸ್ ಪಡೆಯುವ ಸಲುವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು 14 ಸಾವಿರ ರೂ.ಗಳಿಗೆ, ಗಂಡು ಮಗುವನ್ನು 60 ಸಾವಿರ ರೂ. ಒಟ್ಟು 74 ಸಾವಿರಕ್ಕೆ ಮಕ್ಕಳನ್ನು ಮಾರಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಒಂದು ತಿಂಗಳ ಹೆಣ್ಣು ಮಗುವನ್ನು ರಕ್ಷಣೆ ಮಾಡಲಾಗಿದೆ. 2 ವರ್ಷ ಬಾಲಕನಿಗಾಗಿ ತನಿಖೆ ಮಾಡಲಾಗುತ್ತಿದ್ದು ಎರಡು ದಿನಗಳಲ್ಲಿ ಬಾಲಕನ ಪತ್ತೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.