ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಬಂಗಾಳದ ಪ್ರವಾಸಿಗರಿಗೆ ರೈಲ್ವೆ ಬೋಗಿಯಲ್ಲಿ ಕುಳಿತು ತಿನ್ನುವ ಸುಂದರ ಅನುಭವ ದೊರಕುತ್ತಿದೆ. ಹೌದು, ಇದೇ ಮೊದಲ ಬಾರಿಗೆ ಈಶಾನ್ಯ ಫ್ರಾಂಟಿಯರ್ ರೈಲ್ವೆಯು ಪ್ರತಿ ವರ್ಷ ಉತ್ತರ ಬಂಗಾಳಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗಾಗಿ ವೀಲ್‌ಗಳ ಮೇಲೆ ರೆಸ್ಟೋರೆಂಟ್ ಒಂದನ್ನು ಉದ್ಘಾಟಿಸಿದೆ. ಈ ರೆಸ್ಟೋರೆಂಟ್‌ನಲ್ಲಿ 40 ಜನ ಕೆಲಸ ಮಾಡುತ್ತಿದ್ದಾರೆ.
ಹಾಳಾಗಿರುವ ರೈಲ್ವೆ ಕೋಚ್‌ನ್ನು ಸಿಂಗರಿಸಿ, ಸುಂದರವಾದ ರೆಸ್ಟೋರೆಂಟ್‌ನ್ನಾಗಿ ಮಾರ್ಪಾಡು ಮಾಡಿದದಾರೆ. ಸಿಲಿಗುರಿಯ ರೈಲು ನಿಲ್ದಾಣದಲ್ಲಿ ಈ ಹವಾನಿಯಂತ್ರಿತ ರೆಸ್ಟೋರೆಂಟ್ ಇದ್ದು, ಬಗೆಬಗೆಯ ಖಾದ್ಯ ಇಲ್ಲಿ ಲಭ್ಯವಿದೆ.