ಹೊಸದಿಗಂತ ವರದಿ ಕಲಬುರಗಿ:
ಆನ್ಲೈನ್ ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿ ಹೆಚ್ಚಿನ ಹಣ ಗಳಿಸಬಹುದು ಎಂದು ಸುಳ್ಳು ಹೇಳಿ 2.88 ಕೋಟಿ ರೂ. ಮೋಸ ಮಾಡಿದ ಟನೆ ನಗರದಲ್ಲಿ ನಡೆದಿದೆ. ಶರಣ ನಗರದ ವೈದ್ಯ ಡಾ.ಕಿರಣ ದೇಸಾಯಿ ಹಣ ಕಳೆದುಕೊಂಡವರು.
ಫೇಸ್ಬುಕ್ನಲ್ಲಿ ಬಂದ ಆನ್ಲೈನ್ ಶೇರ್ ಮಾರ್ಕೆಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದು, ಅದು ನೇರವಾಗಿ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿಸಿದೆ. ಅಲ್ಲಿ ವಿವಿಧ ಶೇರ್ ಮಾರ್ಕೆಟ್ ಲಾಭದ ಆಮಿಷವೊಡ್ಡಿದೆ. ಮಾಹಿತಿಗೆ ಅನ್ನಿ ಶರ್ಮಾಳನ್ನು ಸಂಪರ್ಕಿಸಿದ್ದು, ಆಕೆ ನಿಕೋಲ್ ಟೈಲರ್ನನ್ನು ಸಂಪರ್ಕಿಸಲು ತಿಳಿಸಿದ್ದಾಳೆ. ಆತನು ಲಿಂಕ್ ಒಂದನ್ನು ಕಳುಹಿಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ದಾಖಲೆ ಪಡೆದು, ಡಿ&ಮ್ಯಾಟ್ ಖಾತೆ ತೆರೆದಿದ್ದಾರೆ. ಈ ಮಧ್ಯೆ ಕೆಲ ದಿನ ಲಾಭದ ಹಣ ಜಮಾ ಆಗುವಂತೆ ತೋರಿಸಿದ್ದಾರೆ.
ನಂತರ ಹೆಚ್ಚಿನ ವಿವಿಧ ಜನರು ಡಿ&ಮ್ಯಾಟ್ ಖಾತೆ ತೆರೆದು, ಹೂಡಿಕೆ ಮಾಡಲು ಹಣ ಕೇಳಿದ್ದು, ಹಂತ ಹಂತವಾಗಿ ವಿವಿಧ ಖಾತೆಗಳಿಗೆ 2.88 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಸೆನ್ ಠಾಣೆಗೆ ಡಾ.ಕಿರಣ ದೇಸಾಯಿ ದೂರು ನೀಡಿದ್ದಾರೆ.