ತಿಮ್ಮಪ್ಪನ ದರುಶನ ಪಡೆಯಲು 25 ಕೆಜಿ ಚಿನ್ನದ ಸರ ಧರಿಸಿ ಬಂದ ಭಕ್ತರ ಕುಟುಂಬ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂದೇ ಖ್ಯಾತಿ ಪಡೆದಿರುವ ಆಂಧ್ರಪ್ರದೇಶದ ತಿರುಪತಿ- ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭಕ್ತರು ಬರೋಬ್ಬರಿ 25 ಕೆ.ಜಿಯ ಚಿನ್ನದ ಒಡೆವೆಗಳನ್ನ ಧರಿಸಿಕೊಂಡು ಬಂದಿದ್ದು ಉಳಿದ ಭಕ್ತರು ಫುಲ್ ಶಾಕ್ ಆಗಿದ್ದಾರೆ.

ಮಹಾರಾಷ್ಟ್ರದ ಪುಣೆ ಮೂಲದ ಕುಟುಂಬವೊಂದು ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದರುಶನಕ್ಕೆಂದು ತಿರುಪತಿಗೆ ಭೇಟಿ ನೀಡಿದೆ. ಕುಟುಂಬದ ಮಹಿಳೆ ಸೀರೆ ಧರಿಸಿದ್ರೆ, ಇಬ್ಬರು ವ್ಯಕ್ತಿಗಳು ಬನಿಯನ್ ಹಾಗೂ ಪಂಚೆ ಹಾಕಿದ್ದರು. ಈ ವೇಳೆ ದೇವರ ದರುಶ ಪಡೆಯಲು ತೆರಳುವಾಗ ಆ ಕುಟುಂಬದ ಇಬ್ಬರು ವ್ಯಕ್ತಿಗಳು, ಓರ್ವ ಮಹಿಳೆ ಹಾಗೂ ಒಂದು ಮಗು ಇವರೆಲ್ಲ ಸೇರಿ ಒಟ್ಟು 25 ಕೆ.ಜಿ ಮೌಲ್ಯದ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ. ಇದರಲ್ಲಿ ಮಹಿಳೆ ಧರಿಸಿದ ಒಡೆವೆಗಳು ಎಲ್ಲರ ಕಣ್ಮನ ಸೆಳೆಯುವಂತೆ ಇವೆ. ಇನ್ನು ವ್ಯಕ್ತಿ ಕುತ್ತಿಗೆಗೆ ಹಾಕಿಕೊಂಡಿದ್ದ ಚಿನ್ನ ಸರಪಣಿಯಂತೆ ಡಿಸೈನ್​ ಮಾಡಲಾಗಿದೆ.

https://x.com/mahesh97651181/status/1826900404635845058?ref_src=twsrc%5Etfw%7Ctwcamp%5Etweetembed%7Ctwterm%5E1826900404635845058%7Ctwgr%5E35b9a68917b584d016dd80a9639a8a26e49fd235%7Ctwcon%5Es1_&ref_url=https%3A%2F%2Fnewsfirstlive.com%2Fvenkateswara-temple-in-pune-devotees-wearing-25-kg-gold-chains%2F

ಪುಣೆ ಕುಟುಂಬ ಹಾಕಿಕೊಂಡಿರುವ ಚಿನ್ನಾಭರಣಗಳ ಒಟ್ಟು ಮೊತ್ತ ಬರೋಬ್ಬರಿ 16 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಸದ್ಯ ಇಷ್ಟೊಂದು ಮೊತ್ತದ ಚಿನ್ನಾಭರಣಗಳನ್ನು ಧರಿಸಿ ತಿಮ್ಮಪ್ಪನ ದರುಶನ ಪಡೆದುಕೊಂಡ ಕುಟುಂಬದ ದೃಶ್ಯಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!