ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮಿತ್ ಮಲ್ಹೋತ್ರಾ ಮತ್ತು ಯಶ್ ಸಹ-ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಕಾಜಲ್ ಅಗರ್ವಾಲ್ ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರೆ. ಆ ಮೂಲಕ ಯಶ್ ಎದುರು ರಾವಣನ ಪತ್ನಿಯಾಗಿ ನಟಿ ಕಾಣಿಸಿಕೊಳ್ಳಲಿದ್ದಾರೆ. ಮಂಡೋದರಿ ಪಾತ್ರಕ್ಕೆ ಕಾಜಲ್ ಅಗರ್‌ವಾಲ್ ಲುಕ್ ಟೆಸ್ಟ್ ಕೊಟ್ಟಿದ್ದು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ವರದಿಯಾಗಿದೆ.
ನಿರ್ಮಾಪಕರು ಎಲ್ಲಾ ಭಾಷೆಗಳಲ್ಲಿ ಸರಿಯಾಗಿ ಹೊಂದುವ ನಟಿಯನ್ನು ಹುಡುಕುತ್ತಿದ್ದರು. ಬಾಲಿವುಡ್‌ನವರು ಸೇರಿದಂತೆ ಅನೇಕ ನಟಿಯರನ್ನು ಪರಿಗಣಿಸಲಾಗಿದ್ದರೂ , ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಕಾಜಲ್ ಅಗರ್ವಾಲ್ ಸಖತ್ ಫೇಮ್ ಪಡೆದುಕೊಂಡಿದ್ದಾರೆ. ಎಂದು ನಿರ್ಮಾಣ ಸಂಸ್ಥೆಯ ಮೂಲಗಳು ತಿಳಿಸಿವೆ.