ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂರಾರು ತಮಿಳು ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ನಟ ಲೋಕೇಶ್ ರಾಜೇಂದ್ರನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತ್ನಿಯಿಂದ ಡಿವೋರ್ಸ್ ನೊಟೀಸ್ ಬಂದಿದ್ದು, ನೋವಿನಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಈ ಬಗ್ಗೆ ಲೋಕೇಶ್ ತಂದೆ ಮಾತನಾಡಿದ್ದು, ಲೋಕೇಶ್ ಹಾಗೂ ಪತ್ನಿ ನಡುವೆ ಏನೋ ಸಮಸ್ಯೆ ಇದ್ದಂತಿತ್ತು. ಆಕೆಯಿಂದ ಡಿವೋರ್ಸ್ ನೊಟೀಸ್ ಬಂದಿತ್ತು. ಸ್ವಲ್ಪ ದಿನದ ಹಿಂದಷ್ಟೇ ಅವನ ಮನೆಗೆ ಹೋಗಿದ್ದೆ, ಖಿನ್ನತೆಯಲ್ಲಿ ಇದ್ದ. ಹಣ ಬೇಕು ಬೇರೆ ಕೆಲಸ ಆರಂಭಿಸುತ್ತೇನೆ ಎಂದಿದ್ದ ಎಂದಿದ್ದಾರೆ.
ಪತ್ನಿಯಿಂದ ದೂರಾದ ಮೇಲೆ ಲೋಕೇಶ್ ಜೀವನ ಅಸ್ತವ್ಯಸ್ತವಾಗಿತ್ತು. ಅತಿಯಾಗಿ ಮದ್ಯಸೇವನೆ ಮಾಡಿ, ಬಸ್‌ಸ್ಟಾಂಡ್‌ನಲ್ಲಿ ಮಲಗಿದ್ದರು ಸೆಲೆಬ್ರಿಟಿಯಾದ ಕಾರಣ ಇವರನ್ನು ಗಮನಿಸಿದ ಅಭಿಮಾನಿಗಳು ಪೊಲೀಸ್‌ಗೆ ಕರೆ ಮಾಡಿದ್ದರು. ಅವರು ಲೋಕೇಶ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.