ಹೊಸ ದಿಗಂತ ವರದಿ, ವಿಜಯಪುರ:
ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಗರದ ರೇಶ್ಮಿ ಕಾಲೋನಿಯಲ್ಲಿ ನಡೆದಿದೆ.
ಮೂಲತಃ ಜಿಲ್ಲೆಯ ಆಲಮೇಲ ನಿವಾಸಿಯಾಗಿದ್ದ ಸಾಯಬಣ್ಣ ಶಂಕರ ಓಲೇಕಾರ ಆತ್ಮಹತ್ಯೆಗೆ ಶರಣಾದ ರೈತ.
ಸಾಯಬಣ್ಣ ಓಲೇಕಾರ ಈತ ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಸಾಲ ಮಾಡಿಕೊಂಡಿದ್ದು, ಸಾಲಬಾಧೆ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ.
ಈ ಸಂಬಂಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.