ಹೊಸ ದಿಗಂತ ವರದಿ,ಮಂಗಳೂರು:
ಸದಾ ಸುದ್ದಿಯಲ್ಲಿರುವ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಕೈದಿಗಳ ನಡುವೆ ನಡೆದಿದೆ.
ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿ ಮೇಲೆ ಮಂಗಳೂರು ಜೈಲಲ್ಲಿ ಸಹ ಕೈದಿಗಳಿಂದ ದಾಳಿ ಯತ್ನ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ನೌಷಾದ್ ಎಂಬಾತನ ಮೇಲೆ ಜೈಲಿನ ಖೈದಿಗಳು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ನೌಷಾದ್ ಅಪಾಯದಿಂದ ಪಾರಾಗಿದ್ದಾನೆ.
ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನೌಷಾದ್‌ನನ್ನು ಮಂಗಳೂರಿಗೆ ಜೈಲಿಗೆ ಕರೆ ತರಲಾಗಿತ್ತು. ದಾಳಿಯ ಮುನ್ಸೂಚನೆ ಮೊದಲೇ ಇದ್ದುದರಿಂದ ಆತನನ್ನು ಮೈಸೂರು ಜೈಲಿಗೆ ಕಳುಹಿಸಲು ಹಿಂದೆಯೇ ನಿರ್ಧರಿಸಲಾಗಿತ್ತು. ಅದಕ್ಕೂ ಮೊದಲು ಮುನ್ನ ಮಂಗಳೂರು ಜೈಲಿಗೆ ಕರೆತರಲಾಗಿತ್ತು. ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿಯನ್ನು ತಪ್ಪಿಸಿದ್ದಾರೆ.