ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆಆಫ್ರಿಕಾದಿಂದ ತಂದ ಹೆಣ್ಣು ಚಿರತೆಯೊಂದು ತಪ್ಪಿಸಿಕೊಂಡು ಪಕ್ಕದ ಗ್ವಾಲಿಯರ್, ಮೊರೆನಾ ಕಾಡಿಗೆ ತಲುಪಿದ್ದು, ಅರಣ್ಯದಂಚಿನ ಗ್ರಾಮಗಳ ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.
‘ವೀರಾ’ ಹೆಸರಿನ ಹೆಣ್ಣು ಚಿರತೆ ಮೇಕೆಯನ್ನು ಭೇಟೆಯಾಡುತ್ತಾ ಗ್ವಾಲಿಯರ್ ತಲುಪಿದೆ. ಗ್ವಾಲಿಯಾರ್ ಮತ್ತು ಮೊರೆನಾ ಅರಣ್ಯದ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಎಚ್ಚರಿಕೆ ನೀಡಲಾಗಿದೆ. ಜಾನುವಾರುಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಚಿರತೆ ರಾಷ್ಟ್ರೀಯ ಉದ್ಯಾನವನಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೇ 4 ರಂದು ಪವನ್ ಎಂಬ ಗಂಡು ಚಿರತೆ ರಾಷ್ಟ್ರೀಯ ಉದ್ಯಾನವನದಿಂದ ತಪ್ಪಿಸಿಕೊಂಡು ರಾಜಸ್ಥಾನದ ಕರೋಲಿ ಜಿಲ್ಲೆಗೆ ತಲುಪಿತ್ತು. ಅದನ್ನು ರಕ್ಷಿಸಿ ವಾಪಸ್ ಕರೆತರಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.